ವಿನಯ್ ರಾಜ್ ಕುಮಾರ್ ಅವರಿಗೆ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ ಸುದೀಪ್

ಮಂಗಳವಾರ, 21 ಜೂನ್ 2016 (11:14 IST)
ರಾಜ್ ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಸಿನಿಮಾ ರನ್ ಆಂಟೋನಿ ಸಿನಿಮಾ ಜುಲೈ 1 ರಂದು ರಿಲೀಸ್ ಆಗುತ್ತಿದೆ. ವಿನಯ್ ರಾಜ್ ಕುಮಾರ್ ಅವರ ಈ ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಅನೇಕ ತಾರೆಯರು ವಿನಯ್ ಅವರ ಎರಡನೇ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ. ಅದರಲ್ಲೂ ನಟ ಕಿಚ್ಚ ಸುದೀಪ್ ಅವರು ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.

ಈಗಾಗಲೇ ರನ್‌ ಆ್ಯಂಟನಿ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಮತ್ತೊಂದು ಕಡೆ ಸಿನಿಮಾದ ಪ್ರಮೋಷನ್ ಕೆಲಸಗಳು ಕೂಡ ಭರದಿಂದ ಸಾಗುತ್ತಿವೆ.ಇನ್ನು ಸ್ಯಾಂಡಲ್ ವುಡ್ ನ ಅನೇಕ ತಾರೆಯರು ಕೂಡ ವಿನಯ್ ರಾಜ್ ಕುಮಾರ್ ಅವರ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.ಆದ್ರೆ ಕಿಚ್ಚ ಸುದೀಪ್ ಅವರು ಮಾತ್ರ ಎಲ್ಲರಿಗಿಂತ ಢಿಪರೆಂಟ್ ಆಗಿ ವಿಶ್ ಮಾಡಿದ್ದಾರೆ. ಯಾರಿಗೂ ಹೆದರಿ ಓಡಬೇಡಿ ಬದಲಾಗಿ ಗೆಲುವಿಗಾಗಿ ಗೆಲುವಿನ ಹಿಂದೆ ಓಡಿ. ಇಡೀ ಸಿನಿಮಾ ತಂಡಕ್ಕೆ ನನ್ನ ಶುಭಾಶಯಗಳು ಅಂತಾ ಹೇಳಿದ್ದಾರೆ. ವಿಡಿಯೋ ಕ್ಲಿಪ್ ಮೂಲಕ ಸುದೀಪ್ ಶುಭ ಹಾರೈಸಿದ್ದಾರೆ.
 
ರನ್ ಆಂಟೋನಿ ಸಿನಿಮಾವನ್ನು  ರಘು ಶಾಸ್ತ್ರಿ ಅವರು ನಿರ್ದೇಶನ ಮಾಡಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಅವರಿಗೆ ನಾಯಕಿಯರಾಗಿ ರುಕ್ಶರ್ ಮಿರ್ ಹಾಗೂ ಸುಶ್ಮಿತಾ ಜೋಷಿ ಅವರು ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ರನ್ ಆಂಟೋನಿ ಸಿನಿಮಾ ಸೆಟ್ಟೇರಿತ್ತು
 
ಈಗಾಗಲೇ ತನ್ನ ಪ್ರಚಾರ ಕಾರ್ಯವನ್ನು ಭರದಿಂದ ನಡೆಸುತ್ತಿದೆ ವಿನಯ್‌ ಆ್ಯಂಡ್‌ ಟೀಮ್‌. ಹಲವಾರು ನಟರು ತಾವು ಯಾರನ್ನ ಕಂಡ್ರೆ ಓಡಿ ಹೋಗ್ತಾರೆ ಅನ್ನೋದನ್ನ ಫೇಸ್‌ಬುಕ್‌ ಮೂಲಕ ಹಂಚಿಕೊಂಡಿದ್ದಾರೆ.  
 
ಅದೇ ರೀತಿ ಈಗ ಕಿಚ್ಚ ಸುದೀಪ್‌ ಸರದಿ. ನಮ್ಮ ಕಿಚ್ಚ ಸುದೀಪ್‌ ಯಾರಿಗೂ ಹೆದರಿ ಅಲ್ಲಿಂದ ಓಡಿ ಹೋಗುವುದಿಲ್ವಂತೆ. ಬದಲಾಗಿ ಗೆಲುವಿನ ಹಿಂದೆ ಓಡಿ ಹೋಗ್ತಾರಂತೆ. ಹಾಗಾಗಿ ವಿನಯ್‌‌ ರಾಜ್‌ಕುಮಾರ್‌ಗೂ ಗೆಲ್ಲೋದಕ್ಕೆ ಓಡಿ ಅಂತ ಹೇಳುತ್ತ ಚಿತ್ರತಂಡಕ್ಕೆ ಯಾವ ರೀತಿ ಶುಭಕೋರಿದ್ದಾರೆ ಅನ್ನೋದನ್ನ ಈ ವಿಡಿಯೋದಲ್ಲಿ ನೋಡಿ. 

ವೆಬ್ದುನಿಯಾವನ್ನು ಓದಿ