ಸುಮಲತಾ ಅಂಬರೀಶ್ ಗೆ ಮತ್ತೆ ನಕಲಿ ಫೇಸ್ ಬುಕ್ ಖಾತೆ ಕಾಟ

ಸೋಮವಾರ, 16 ಸೆಪ್ಟಂಬರ್ 2019 (09:29 IST)
ಬೆಂಗಳೂರು: ಸಂಸೆ ಸುಮಲತಾ ಅಂಬರೀಶ್ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರು ಹೇಳಿಕೊಂಡು ಇಲ್ಲ ಸಲ್ಲದ ಸುದ್ದಿ ಹಬ್ಬಿಸುವವರ ವಿರುದ್ಧ ಕಿಡಿ ಕಾರಿದ್ದರು.


ತಮ್ಮ ಹೆಸರಿನ ನಕಲಿ ಖಾತೆ ಸೃಷ್ಟಿಸಿ ತಾನು ನೀಡಿದ ಹೇಳಿಕೆಯೆಂಬಂತೆ ವಿವಾದಾತ್ಮಕ ಹೇಳಿಕೆ ಹಬ್ಬಿಸುವವರ ವಿರುದ್ಧ ಎಚ್ಚರಿಕೆ ನೀಡಿದ್ದ ಸುಮಲತಾ ಸದ್ಯದಲ್ಲೇ ಇಂತಹ ನಕಲಿಗಳನ್ನು ಜೈಲಿಗಟ್ಟುವುದಾಗಿ ಹೇಳಿದ್ದರು.

ಆದರೂ ಸುಮಲತಾ ಅಂಬರೀಶ್ ಗೆ ನಕಲಿಗಳ ಕಾಟ ನಿಂತಿಲ್ಲ. ತಾನು ಇಷ್ಟು ಹೇಳಿದ ಮೇಲೂ ನಕಲಿ ಖಾತೆ ಮುಂದುವರಿಸಿದವರ ವಿರುದ್ಧ ಮತ್ತೆ ಸುಮಲತಾ ಕಿಡಿ ಕಾರಿದ್ದಾರೆ. ತಾನು ಇಷ್ಟು ಎಚ್ಚರಿಕೆ ನೀಡಿದ ಮೇಲೂ ಈ ಬೆಳವಣಿಗೆ ನಿಂತಿಲ್ಲ. ಈ ಪೇಜ್ ಬಗ್ಗೆ ವರದಿ ಮಾಡಿ. ಈಗಾಗಲೇ ಸೈಬರ್ ಕ್ರೈಮ್ ಗೆ ದೂರು ನೀಡಿದ್ದೇನೆ. ಸದ್ಯದಲ್ಲೇ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಸುಮಲತಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ