ಅಣ್ಣನನ್ನು ನೋಡೋಕೂ ಬಿಡ್ತಾ ಇಲ್ಲ: ಡಿಕೆಶಿ ಸಹೋದರ ಡಿಕೆ ಸುರೇಶ್ ಅಳಲು

ಬುಧವಾರ, 4 ಸೆಪ್ಟಂಬರ್ 2019 (10:37 IST)
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧಿತರಾಗಿರುವ ಮಾಜಿ ಸಚಿವ, ಹಾಲಿ ಶಾಸಕ ಡಿಕೆ ಶಿವಕುಮಾರ್ ರನ್ನು ಭೇಟಿಯಾಗಲೂ ಅವಕಾಶ ಕೊಡ್ತಿಲ್ಲ ಎಂದು ಸಹೋದರ, ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ.


ಅಣ್ಣನನ್ನು ಭೇಟಿಯಾಗೋಕೂ ಇಡಿ ಅಧಿಕಾರಿಗಳು ಬಿಡ್ತಾ ಇಲ್ಲ ಎಂದು ಡಿಕೆ ಸುರೇಶ್ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಮೇಲಿನವರ ಆದೇಶದಂತೆ ಅಣ್ಣನನ್ನು ಬಂಧಿಸಿದ್ದಾರೆ. ಇದೆಲ್ಲಾ ಪಿತೂರಿ. ಅಣ‍್ಣನನ್ನು ಬಿಡಿಸಲು ಕಾನೂನಿನ ಮೂಲಕ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲಾ ಪ್ರಯತ್ನವನ್ನೂ ಮಾಡುತ್ತೇವೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ