ರಾಜಕೀಯಕ್ಕೆ ಬರಲು ಒತ್ತಾಯಿಸಿದವರಿಗೆ ಸುಮಲತಾ ಅಂಬರೀಶ್ ಹೇಳಿದ್ದೇನು ಗೊತ್ತಾ?
ಶನಿವಾರ, 2 ಫೆಬ್ರವರಿ 2019 (10:07 IST)
ಬೆಂಗಳೂರು: ಅಂಬರೀಶ್ ನಿಧನದ ನಂತರ ಮಂಡ್ಯ ಕಾಂಗ್ರೆಸ್ ನ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿದೆ. ರೆಬಲ್ ಸ್ಟಾರ್ ರಿಂದ ತೆರವಾದ ಸ್ಥಾನಕ್ಕೆ ಸುಮಲತಾ ಅಂಬರೀಶ್ ಸ್ಪರ್ಧಿಸುವ ಬಗ್ಗೆ ಒತ್ತಾಯಗಳು ಕೇಳಿಬರುತ್ತಿವೆ.
ಅಂಬರೀಶ್ ನಂತರ ರಾಜಕೀಯಕ್ಕೆ ಬರುವ ಬಗ್ಗೆ ತಮ್ಮ ಮೇಲೆ ಅಭಿಮಾನಿಗಳು ಒತ್ತಾಯ ಹೇರುತ್ತಿರುವುದಕ್ಕೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.
‘ಸದ್ಯದ ಪರಿಸ್ಥಿತಿಯಲ್ಲಿ ನಾನು ಏನನ್ನೂ ನಿರ್ಧರಿಸಿಲ್ಲ. ಮಂಡ್ಯದ ಜನತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಯಾವುದನ್ನೂ ತೀರ್ಮಾನಿಲ್ಲ. ಅಷ್ಟಕ್ಕೂ ಎಲ್ಲವನ್ನೂ ನಾನೊಬ್ಬನೇ ತೀರ್ಮಾನಿಸಲು ಸಾಧ್ಯವಿಲ್ಲ. ಅಂಬರೀಶ್ ಹೋದ ಮೇಲೂ ಇಲ್ಲಿನ ಜನ ನಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಗೆ ನಾವು ಏನು ಕೊಟ್ಟರೂ ಕಡಿಮೆಯೇ’ ಎಂದು ಸುಮಲತಾ ಹೇಳಿಕೊಂಡಿದ್ದಾರೆ.
‘ಆದರೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪಕ್ಷದ ಹಿರಿಯ ಮುಖಂಡರ ಬಳಿ ಇನ್ನೂ ಚರ್ಚೆ ಮಾಡಿಲ್ಲ. ಅಂಬರೀಶ್ ಇರುವವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ನಾವೂ ಕಾಂಗ್ರೆಸ್ ಎಂದೇ ಇದ್ದೇವೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಏನಾಗುತ್ತದೆ ನೋಡೋಣ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸುವುದಿದ್ದರೂ ಅದು ಮಂಡ್ಯದಿಂದ ಮಾತ್ರ’ ಎಂದು ಸುಮಲತಾ ಸ್ಪಷ್ಟವಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ