ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನೋಡುವ ಜತೆಗೆ ಮತ್ತೊಂದು ಆಸೆ ಹೊರ ಹಾಕಿದ ಕಿಚ್ಚ ಸುದೀಪ್!
ಸಿನಿಮಾ ಜತೆಗೆ ಗಣೇಶ್ ಪತ್ನಿ ಶಿಲ್ಪಾ ತಯಾರು ಮಾಡುವ ಖಾದ್ಯವೊಂದನ್ನು ಸೇವಿಸಬೇಕು ಮತ್ತು ಗಣೇಶ್ ಸ್ನೇಹಿತ ನಟ ರವಿಶಂಕರ್ ಗೌಡ ಒಟ್ಟಾಗಿ ಸೇರಿಕೊಂಡು ಪಾರ್ಟಿ ಮಾಡಬೇಕು ಎಂದು ಕಿಚ್ಚ ಬೇಡಿಕೆ ಮುಂದಿಟ್ಟಿದ್ದಾರೆ. ಇದನ್ನು ನೋಡಿ ಶಿಲ್ಪಾ ಗಣೇಶ್ ಕೂಡಾ ಪ್ರತಿಕ್ರಿಯಿಸಿದ್ದು, ಸುದೀಪ್ ಗೆ ಪಾರ್ಟಿಗೆ ಆಹ್ವಾನಿಸಿದ್ದಾರೆ. ಕಿಚ್ಚ ಕೂಡಾ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ.