ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ ಬುಧವಾರ ಮುಂಜಾನೆ 10.30ಕ್ಕೆ ವಿಧಿವಶರಾಗಿದ್ದಾರೆ.ಅವರಿಗೆ 93 ವರ್ಷ ವಯಸ್ಸಾಗಿತ್ತು.
ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಕಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವರದಿಗಳ ಪ್ರಕಾರ ನಾಳೆ ಮುಂಬೈನಲ್ಲಿಯೇ ಅವರ ಅಂತ್ಯಸಂಸ್ಕಾರ ನಡೆಯಲಿದೆ.
ಹೊಟೆಲ್ ಉದ್ಯಮಿಯಾಗಿದ್ದ ಕರ್ನಾಟಕದ ಕರಾವಳಿ ಮೂಲದ ಶೆಟ್ಟಿ ತಮ್ಮ ಪತ್ನಿ , ಪುತ್ರ ಸುನೀಲ್ ಶೆಟ್ಟಿ ಮತ್ತು ಮಗಳು ಸುಜಾತಾಳನ್ನು ಅಗಲಿದ್ದಾರೆ.
2013ರಲ್ಲಿ ಪ್ಯಾರಾಲಿಸೀಸ್‌ಗೆ ಒಳಗಾಗಿದ್ದ ಅವರನ್ನು ಮನೆಯಲ್ಲಿಯೇ ತೀವ್ರ ನಿಗಾ ಘಟಕ ನಿರ್ಮಿಸಿ ನೋಡಿಕೊಳ್ಳಲಾಗುತ್ತಿತ್ತು. ತನ್ನ ತಂದೆಯನ್ನು ನೋಡಿಕೊಳ್ಳಲು ಸುನೀಲ್ ನಟನಾ ವೃತ್ತಿಯಿಂದ ದೂರ ಉಳಿದಿದ್ದರು ಮತ್ತು ತಂದೆಯ ಉದ್ಯಮವನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ.