ಕಮರ್ಷಿಯಲ್ ಆಡ್‌ನಲ್ಲಿ ಸನ್ನಿ ಬೆತ್ತಲೆಯಾಗಿ..?‍!

ಶನಿವಾರ, 28 ಮಾರ್ಚ್ 2015 (10:36 IST)
ಭಾರತೀಯ ಚಲನ ಚಿತ್ರರಂಗದಲ್ಲಿ ತನ್ನ ನಟನೆ ಹಾವ ಭಾವದಿಂದ ಎಲ್ಲರನ್ನು ಆಕರ್ಷಿಸುತ್ತಿರುವ ನಟಿ ಸನ್ನಿ ಲಿಯೋನ್. ಸನ್ನಿ ಲಿಯೋನ್ ಈವರೆಗೂ ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರೂ ತನಗೆ ಮಾತ್ರ ಇನ್ನು ಉತ್ತಮ ಚಿತ್ರ ಮಾಡ ಬೇಕು ಎನ್ನುವ ತಪನ ಹೊಂದಿದ್ದಾಳಂತೆ! ಈಗ ಒಂದು ಕಮರ್ಷಿಯಲ್ ಆಡ್ ನಲ್ಲಿ ಆಕೆ ನಟಿಸಿದ್ದಕ್ಕೆ ಹೆಚ್ಚು ಸಂತೋಷ ಆಗಿದೆ ಎನ್ನುವ ಸಂಗತಿಯನ್ನು ಹೇಳಿದ್ದಾಳೆ. 
ಇದಕ್ಕೆ ಸಂಬಂಧಪಟ್ಟಂತೆ ವಿವರಗಳತ್ತ ಹೋದರೆ, ಸನ್ನಿಲಿಯೋನ್ ಈಗ ಬಿ ಟೌನ್ ನಲ್ಲಿ ಲೀಡ್ ಪಾತ್ರಗಳು ಇರುವಂತಹ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾಳೆ. ಒಂದು ಕಡೆ ಚಿತ್ರಗಳು ಮತ್ತೊಂದು ಕಡೆ ಕಮರ್ಷಿಯಲ್ ಆಡ್‌ಗಳಲ್ಲಿ ನಟನೆ ಮಾಡುತ್ತಿರುವ ಸನ್ನಿ ಲಿಯೋನ್ ಕೈ ತುಂಬಾ ಹಣದ ಗಳಿಕೆ ಮಾಡುತ್ತಿದ್ದಾಳೆ. ಆದರೆ ಆಕೆ ತಾನು ನಟಿಸಿದ ಕಮರ್ಷಿಯಲ್ ಆಡ್‌ನಲ್ಲಿ ಬೆತ್ತಲೆಯಾಗಿ ನಟಿಸಿದ್ದ ಬಗ್ಗೆ  ಜಾಹೀರಾತು ಕಂಪನಿಯಿಂದ ಸುದ್ದಿ ಹೊರ ಬಂದಿದೆ. 
 
ಒಂದು ಲಗ್ಜುರಿ ಕಾರ್‌ಗೆ ಸಂಬಂಧ ಪಟ್ಟ ಜಾಹೀರಾತಿನಲ್ಲಿ ಸನ್ನಿ ಈ ರೀತಿ ನಟನೆ ಮಾಡಿದ್ದಾಳಂತೆ. ಇದಕ್ಕೆ ಸಂಬಂಧಪಟ್ಟ ವಿವರಗಳು ಶೀಘ್ರದಲ್ಲೆ ಹೊರ ಬರಲಿದೆ. ಆದರೆ ಸನ್ನಿ ಲಿಯೋನ್ ಮಾತ್ರ ತಾನು ಒಂದು ಸೂಪರ್ ಆಡ್ ಒಂದರಲ್ಲಿ ನಟಿಸಿದ್ದೇನೆ ಅದು ನನ್ನ ಮನ ಸೆಳೆದ ಅತಿ ಮುಖ್ಯವಾದ ಜಾಹೀರಾತಾಗಿದೆ ಎಂದಿದ್ದಾಳೆ. ಒಟ್ಟಾರೆ ಬೆತ್ತಲೆಯಾಗಿ ಕಾರು ನಡೆಸಿರಿ ಎನ್ನುವ ಸಂದೇಶ ಇದೆ ಎಂದು ಕಾಣುತ್ತೆ. ಬೆತ್ತಲೆ ಪ್ರಿಯರು ಕಾರು ಕೊಂಡು...!

ವೆಬ್ದುನಿಯಾವನ್ನು ಓದಿ