ತಲೈವಾ ರಜನಿಗೆ ಹುಟ್ಟುಹಬ್ಬದ ಸಂಭ್ರಮ: ಬಾಬಾ ರಿ ರಿಲೀಸ್

ಸೋಮವಾರ, 12 ಡಿಸೆಂಬರ್ 2022 (09:20 IST)
Photo Courtesy: Twitter
ಚೆನ್ನೈ: ಅಭಿಮಾನಿಗಳ ಪ್ರೀತಿಯ ತಲೈವಾ, ಸೂಪರ್ ಸ್ಟಾರ್ ರಜನೀಕಾಂತ್ ಗೆ ಇಂದು ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಬಾಬಾ ಗಿಫ್ಟ್ ಸಿಕ್ಕಿದೆ.

ರಜನಿ ನಾಯಕರಾಗಿ ಅಭಿನಯಿಸಿದ್ದ ಬಾಬಾ ಸಿನಿಮಾ ಇಂದು ಬರೋಬ್ಬರಿ 20 ವರ್ಷಗಳ ಬಳಿಕ ರಿ ರಿಲೀಸ್ ಆಗಿದೆ. ರಜನಿ ಹುಟ್ಟುಹಬ್ಬದ ನಿಮಿತ್ತ ಬಾಬಾ ಸಿನಿಮಾವನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದೆ.

72 ವರ್ಷಕ್ಕೆ ಕಾಲಿಟ್ಟಿರುವ ರಜನಿ ಈಗಲೂ ತಮ್ಮ ಖದರ್ ಉಳಿಸಿಕೊಂಡಿದ್ದಾರೆ. ಇದೀಗ ಜೈಲರ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಮಗಳು ಐಶ್ವರ್ಯಾ ನಿರ್ದೇಶನದ ಲಾಲ್ ಸಲಾಂ ಸಿನಿಮಾದಲ್ಲೂ ಪಾತ್ರ ಮಾಡಲಿದ್ದಾರೆ. ಕಳೆದ ಐದು ದಶಕಗಳಿಂದ ಸಿನಿ ರಸಿಕರನ್ನು ರಂಜಿಸುತ್ತಿರುವ ತಲೈವಾ ರಜನಿಗೆ ಹುಟ್ಟುಹಬ್ಬದ ಶುಭಾಶಯಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ