ಮಾರ್ಚ್ 3ರಂದು ಭಾರತ ಸೇರಿದಂತೆ ರಜನಿಕಾಂತ್ ಅಭಿಮಾನಿಗಳು ಹೆಚ್ಚಾಗಿರುವ ಜಪಾನ್ನಲ್ಲಿ ಈ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ರಜನಿಕಾಂತ್ ಡೈಲಾಗ್ಸ್, ಮ್ಯಾನರಿಸಂ, ಫ್ಲ್ಯಾಶ್ಬ್ಯಾಕ್ನಲ್ಲಿ ಸಾಗುವ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು.
ಇದಕ್ಕಿಂತಲೂ ಮುಖ್ಯವಾಗಿ ’ಬಾಷಾ ಭಾಗ 2’ ಬಂದಿದ್ದರೆ ಚೆನ್ನಾಗಿತ್ತು ಎಂದು ಅಭಿಮಾನಿಗಳು ಬಯಸಿದ್ದರು. ಆದರೆ ಈ ರೀತಿಯ ಚಿತ್ರ ಮತ್ತೆ ಮಾಡಲಿಕ್ಕೆ ಆಗಲ್ಲ. ತಾನು ನಟಿಸುವುದೂ ಇಲ್ಲ ಎಂದು ರಜನಿಕಾಂತ್ ಸಂದರ್ಭವೊಂದರಲ್ಲಿ ತಿಳಿಸಿದ್ದರು. ಹಾಗಾಗಿ ಸೂಪರ್ ಸ್ಟಾರ್ ಅಭಿಮಾನದ ಮೇರೆಗೆ ಬಾಷಾ ನಿರ್ಮಾಪಕ ಆರ್ ಎಂ ವೀರಪ್ಪನ್ ಈ ಚಿತ್ರದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದಾರೆ.