ಕಿಲ್ಲರ್ ವೆಂಕಟೇಶ್ ಪ್ರಕರಣ: ಕನ್ನಡ ಸಿನಿಮಾದ ಪೋಷಕ ನಟರ ಅಭದ್ರ ಬದುಕು

ಶುಕ್ರವಾರ, 21 ಫೆಬ್ರವರಿ 2020 (08:45 IST)
ಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೊಬ್ಬ ಪೋಷಕ ನಟ ಅನಾರೋಗ್ಯದಿಂದಾಗಿ ಅಸಹಾಯಕ ಪರಿಸ್ಥಿತಿಯಲ್ಲಿದ್ದು, ಚಿಕಿತ್ಸೆಗೆ ಹಣ ಭರಿಸಲಾಗದೇ ಸಹಾಯ ಬೇಡುವ ಪರಿಸ್ಥಿತಿಯಲ್ಲಿದ್ದಾರೆ.


ಈ ರೀತಿ ಪೋಷಕ ನಟರು ಅನಾರೋಗ್ಯ, ಅಸಹಾಯಕ ಪರಿಸ್ಥಿತಿಯಲ್ಲಿ ಬೇಡುವ ಪರಿಸ್ಥಿತಿಗೆ ಬಂದಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ನಟ, ನಿರೂಪಕ ಸಂಜೀವ್ ಕುಲಕರ್ಣಿ ಕೂಡಾ ಇದೇ ಪರಿಸ್ಥಿತಿಯಲ್ಲಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

ಕನ್ನಡ ಚಿತ್ರರಂಗದಲ್ಲಿ ಇಂತಹ ಅಸಹಾಯಕ ಪೋಷಕ ನಟರ ಬದುಕು ಗಟ್ಟಿಗೊಳಿಸುವಂತಹ ಸಂಸ್ಥೆ, ವ್ಯವಸ್ಥೆಯನ್ನು ವಾಣಿಜ್ಯ ಮಂಡಳಿ ಮಾಡಬೇಕಿದೆ. ಅಸಹಾಯಕ ನಟರ ಜೀವನಕ್ಕೆ ಉಪಯೋಗವಾಗುವಂತಹ ಯೋಜನೆ ರೂಪಿಸಬೇಕಿದೆ. ಇದರಿಂದ ಇವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ ಅಸಹಾಯಕ ಪರಿಸ್ಥಿತಿಗೆ ಬಂದು ನಿಲ್ಲುವುದು ತಪ್ಪುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ