ಮುಂದಿನ ವರ್ಷ ಸುಶಾಂತ್ ಸಿಂಗ್ ರಜಪೂತ್ ವಿವಾಹ

ಗುರುವಾರ, 1 ಅಕ್ಟೋಬರ್ 2015 (10:58 IST)
ಬಾಲಿವುಡ್ ಅಂಗಳದಲ್ಲಿ ಸದ್ಯ ಭರವಸೆ ಮೂಡಿಸಿರುವ ಯುವ ನಟರಲ್ಲಿ ಸುಶಾಂತ್ ಸಿಂಗ್ ರಜಪೂತ್ ಕೂಡ ಒಬ್ಬರು ಒಬ್ಬರು. ತಮ್ಮ  ಮೊದಲ ಸಿನಿಮಾ ಮೂಲಕವೇ ಬಾಲಿವುಡ್ ಅಂಗಳದಲ್ಲಿ ಉತ್ತಮ ಪ್ರಶಂಸೆ ಗಳಿಸಿದ ಸುಶಾಂತ್ ರಜಪೂತ್ ಬಾಲಿವುಡ್ ನ ಬೇಡಿಕೆಯ ನಟರಲ್ಲಿ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ.
ಇದೇ ಸುಶಾಂತ್ ವರ್ಷ ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ತಮ್ಮ ಬಹುದಿನದ ಗೆಳತಿ ಅಂಕಿತಾ ಲೋಖಂಡೆ ಅವರನ್ನು ವರಿಸಲಿದ್ದಾರೆ. 2016ರಲ್ಲಿ ಇವರಿಬ್ಬರು ಸಂಸಾರಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಹಿಂದೆ ಅನೇಕ ಬಾರಿ ಇವರ ವಿವಾಹದ ಬಗ್ಗೆ ಗುಸುಗುಸುಗಳು ಕೇಳಿ ಬರುತ್ತಲೇ ಇದ್ದವು. ಆದ್ರೆ ಇಬ್ಬರೂ ವಿವಾಹದ ಬಗ್ಗೆ ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ ಸತಿಪತಿಗಳಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿತ್ತು.
 
ಸದ್ಯ ಸುಶಾಂತ್ ಸಿಂಗ್ ರಜಪೂತ್ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಸಿನಿಮಾ ಎಂ.ಎಸ್.ಧೋನಿ ಅನ್ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ  ಹುಟ್ಟು ಹಾತಕಿದೆ. ಸುಶಾಂತ್ ವೃತ್ತಿ ಬದುಕಿನಲ್ಲೇ ಈ ಸಿನಿಮಾ ಅತ್ಯಂತ ಮಹತ್ವದ್ದು ಅಂತಾ ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ