ದುನಿಯಾ ವಿಜಿ ಅಭಿಮಾನಿಗಳಿಗೆ ಸಿಹಿ ಸುದ್ದಿ, 'ಭೀಮ' ತೆರೆಗೆ ಬರಲು ಡೇಟ್ ಫಿಕ್ಸ್‌

Sampriya

ಶುಕ್ರವಾರ, 21 ಜೂನ್ 2024 (16:58 IST)
photo Courtesy Instagram
ಬೆಂಗಳೂರು: ನಟ ದುನಿಯಾ ವಿಜಯ್ ಅವರ ಬಹುನಿರೀಕ್ಷಿತ  'ಭೀಮ' ಸಿನಿಮಾ ತೆರೆಗೆ ಬರುವ ದಿನಾಂಕವನ್ನು ಫಿಕ್ಸ್ ಮಾಡಿದೆ. ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಸಿನಿಮಾದ ನಟ, ನಿರ್ದೇಶಕ  ದುನಿಯಾ ವಿಜಯ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿ ಹೇಳಿಕೊಂಡಿದ್ದಾರೆ.

ಭೀಮಾ, ಕೃಷ್ಣ ಕ್ರಿಯೇಷನ್ಸ್ ಮತ್ತು ಜಗದೀಶ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಕ್ರಮವಾಗಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಅವರು ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರಲಿದೆ. ಆಗಸ್ಟ್ 9 ರಂದು ಸಿನಿಮಾ ತೆರೆಗೆ ಬರಲಿದ್ದು, ಇದು ವಿಜಯ್‌ಗೆ ಸಲಗ ನಂತರ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಸಿನಿಮಾವಾಗಿದೆ.  

ಮಾಸ್ತಿ ಉಪ್ಪಾರಹಳ್ಳಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಅಶ್ವಿನಿ ಮತ್ತು ಕಲ್ಯಾಣಿ ರಾಜು ಕೂಡ ನಟಿಸಿದ್ದಾರೆ. ಭೀಮಾ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಶಿವಸೇನಾ ಛಾಯಾಗ್ರಹಣ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ