ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಭೀಮ ಟೀಸರ್

Krishnaveni K

ಶನಿವಾರ, 20 ಜನವರಿ 2024 (12:01 IST)
ಬೆಂಗಳೂರು: ನಟ ದುನಿಯಾ ವಿಜಯ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನಕ್ಕೆ ಅವರ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಗಲಿದೆ.

ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ ಭೀಮ ಸಿನಿಮಾ ಕೆಲಸ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಹಾಡೊಂದು ಬಿಡುಗಡೆಯಾಗಿ ಸುದ್ದಿ ಮಾಡಿತ್ತು. ಇದೀಗ ಟೀಸರ್ ಬಿಡುಗಡೆ ಮಾಡಲು ವಿಜಿ ತೀರ್ಮಾನಿಸಿದ್ದಾರೆ.

ಇಂದು ದುನಿಯಾ ವಿಜಿ ಹುಟ್ಟುಹಬ್ಬವಿದ್ದು ಇದೇ ದಿನಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಭೀಮ ಸಿನಿಮಾದ ಟೀಸರ್ ಲಾಂಚ್ ಆಗಲಿದೆ. ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಹಾರ, ತುರಾಯಿ, ಕೇಕ್ ತರುವುದು ಬೇಡ ಎಂದು ವಿಜಿ ಮೊದಲೇ ಎಚ್ಚರಿಕೆ ನೀಡಿದ್ದರು.

ಮೊನ್ನೆಯಷ್ಟೇ ದುನಿಯಾ ವಿಜಿ ತಮ್ಮ ಮಹಿಳಾ ಖೈದಿಗಳ ರಿಲೀಸ್ ಮಾಡಲು ಸಹಾಯ ಮಾಡಿ ಸುದ್ದಿಯಾಗಿದ್ದರು. ಇಂದು ತಮ್ಮ ತಂದೆ-ತಾಯಿರ ಸಮಾಧಿ ಮುಂದೆ ವಿಜಿ ಹುಟ್ಟುಹಬ್ಬ ಆಚರಿಸಿಕೊಲ್ಳಲಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ