ಸೈರಾ ನರಸಿಂಹ ರೆಡ್ಡಿ ಟೀಸರ್ ನೋಡಿದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಒಂದೇ ಒಂದು ಬೇಜಾರು!

ಬುಧವಾರ, 21 ಆಗಸ್ಟ್ 2019 (09:36 IST)
ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ನಾಯಕರಾಗಿ ಅಭಿನಯಿಸುತ್ತಿರುವ ಸೈರಾ ನರಸಿಂಹ ರೆಡ್ಡಿ ಎಂಬ ಐತಿಹಾಸಿಕ ತೆಲುಗು ಮೂಲದ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದೆ.


ಟೀಸರ್ ನಲ್ಲಿ ಬ್ರಿಟಿಷರ ಕಾಲಘಟ್ಟದ ಚಿತ್ರಣ, ಮೆಗಾಸ್ಟಾರ್ ಎನರ್ಜಿ, ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್ ಎಂಟ್ರಿ ನೋಡಿ ಪ್ರೇಕ್ಷಕರು ಖುಷ್ ಆಗಿದ್ದಾರೆ. ಈ ಸಿನಿಮಾ ತೆಲುಗು ಮಾತ್ರವಲ್ಲದೆ, ಕನ್ನಡ, ಹಿಂದಿ, ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.

ಆದರೆ ಟೀಸರ್ ನೋಡಿದ ಕಿಚ್ಚ ಸುದೀಪ್ ಅಭಿಮಾನಿಗಳು ಒಂದೇ ಒಂದು ಕಾರಣಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸರಿ, ಟೀಸರ್ ನಲ್ಲಿ ಕಿಚ್ಚನ ಕಂಚಿನ ಕಂಠ ಕೇಳದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.ಅದರ ಹೊರತಾಗಿ ಇದರಲ್ಲಿ ಕಿಚ್ಚನ ವೇಷಭೂಷಣ, ಎಂಟ್ರಿ ಎಲ್ಲವನ್ನೂ ಕನ್ನಡ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ