ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಮಕ್ಕಳ ನೃತ್ಯ ನೋಡಿ ಬೆರಗಾದ ಕಿಚ್ಚ ಸುದೀಪ್ ಹೇಳಿದ್ದೇನು?

ಸೋಮವಾರ, 19 ಆಗಸ್ಟ್ 2019 (09:03 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತಮ್ಮ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದ ಮಕ್ಕಳನ್ನು ನೋಡಿ ಸ್ವತಃ ಕಿಚ್ಚ ಸುದೀಪ್ ಬೆರಗಾಗಿದ್ದಾರೆ.


ಡಿಕೆಡಿ ವೇದಿಕೆಯಲ್ಲಿ ಬಾಲಪ್ರತಿಭೆ ಪ್ರೇಕ್ಷಿತ್, ಅನ್ವಿಷರ ಮೈನವಿರೇಳಿಸುವ ಪರ್ಫಾರ್ಮೆನ್ಸ್ ನೋಡಿ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ರಕ್ಷಿತಾ ಪ್ರೇಮ್ ಈ ನೃತ್ಯವನ್ನು ಕಿಚ್ಚ ಸುದೀಪ್ ನೋಡಿದ್ರೆ ಸಿಕ್ಕಾಪಟ್ಟೆ ಇಷ್ಟಪಡ್ತಾ ಇದ್ರು ಎಂದು ಕಾಮೆಂಟ್ ಮಾಡಿದ್ದರು. ಅಷ್ಟೇ ಅಲ್ಲ, ಇದು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿ ಕೊನೆಗೆ ಕಿಚ್ಚನ ಗಮನಕ್ಕೂ ಬಂದಿದೆ.

ಇದೀಗ ಸ್ವತಃ ಸುದೀಪ್ ಈ ನೃತ್ಯವನ್ನು ನೋಡಿ ಬೆರಗಾಗಿದ್ದು, ನಿಜಕ್ಕೂ ಮಕ್ಕಳ ಪ್ರತಿಭೆ ಅದ್ಭುತವಾದದ್ದು. ನನ್ನ ಹಾಡನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಎಂದು ಕಿಚ್ಚ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ