ಮಾರತ್‌ಹಳ್ಳಿ ಸೆಂಟ್ರಲ್ ಮಾಲ್‌ನಲ್ಲಿ ಟೈಸನ್ ಸಾಹಸ ದೃಶ್ಯಗಳ ಚಿತ್ರೀಕರಣ

ಸೋಮವಾರ, 25 ಮೇ 2015 (10:25 IST)
ವಿನೋದ್ ಪ್ರಭಾಕರ್, ಗಾಯತ್ರಿ ಅಯ್ಯರ್  ಅಭಿನಯದ ಟೈಸನ್ ಚಿತ್ರದ ಸಾಹಸ ದೃಶ್ಯಗಳ ಸನ್ನಿವೇಶದ ಚಿತ್ರೀಕರಣ ಭರದಿಂದ ನಡೆದು ಪೂರ್ಣಗೊಂಡಿದೆ. ಧ್ರುವಿನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಬಾಬುರೆಡ್ಡಿ ಅವರು ನಿರ್ಮಿಸುತ್ತಿರುವ ಟೈಸನ್ ಚಿತ್ರದ ಸಾಹಸ ದೃಶ್ಯಗಳನ್ನು  ಮಾರತ್ ಹಳ್ಳಿಯ ಸೆಂಟ್ರಲ್ ಮಾಲ್ ನಲ್ಲಿ ಚಿತ್ರೀಕರಣ ಮಾಡಲಾಯಿತು. ಪಳನಿರಾಜ್ ಸಾಹಸ ನಿರ್ದೇಶನದಲ್ಲಿ ಮೂಡಿಬಂದ ಈ ಸನ್ನಿವೇಶದಲ್ಲಿ ವಿನೋದ್ ಪ್ರಭಾಕರ್, ಗಾಯತ್ರಿ ಅಯ್ಯರ್ ಹಾಗೂ ಸಾಹಸ ಕಲಾವಿದರು ಅಭಿನಯಿಸಿದ್ದಾರೆ.
ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಗಾಯತ್ರಿ ಅಯ್ಯರ್. ರವಿಕಾಳೆ, ಸುಮನ್, ಶ್ರೀನಿವಾಸಮೂರ್ತಿ, ವಿನಯಪ್ರಸಾದ್, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ. ರಾಮ್ ನಾರಾಯಣ್  ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಜೆಸ್ಸಿಗಿಫ್ಟ್, ಗಣೇಶ್ ಹಾಗೂ ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ.ಹರ್ಷ,ಮುರುಳಿ, ರಾಮು ನೃತ್ಯ ನಿರ್ದೇಶನ, ಶ್ರೀನಿವಾಸ್ ಅವರ ಕಲಾ ನಿರ್ದೇಶನ,ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ, ವೆಂಕಟೇಶ್ ಸಂಕಲನವನ್ನು ಟೈಸನ್ ಹೊಂದಿದೆ. 

ವೆಬ್ದುನಿಯಾವನ್ನು ಓದಿ