ತಮಿಳಿನ ವಾಲು ಕನ್ನಡಕ್ಕೆ ರೀಮೇಕ್‌:ರಾಕಿಂಗ್ ಸ್ಟಾರ್ ಯಶ್ ನಾಯಕ

ಬುಧವಾರ, 25 ಫೆಬ್ರವರಿ 2015 (10:09 IST)
ಕಾಲಿವುಡ್ ಚಿತ್ರರಂಗದ ಬೋಲ್ಡ್ ಹಾಗೂ ವಿವಾದಿತ ನಟ ಶಿಂಬು. ಆಟ ತನ್ನ ನಟನೆ ಮಾತ್ರವಲ್ಲ ತನ್ನ ವರ್ತನೆಯಿಂದಲೂ ಸಹಿತ ಮಾಧ್ಯಮಗಳ ಕಣ್ಣಿಗೆ ಸದಾ ಕಾಣಿಸಿಕೊಳ್ಳುತ್ತಿರುವ ವ್ಯಕ್ತಿ. ಶಿಂಬು ನಟನೆಯ ವಾಲು ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಆ ಚಿತ್ರದ ರೀಮೇಕ್ ಹಕ್ಕುಗಳು ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕರ ಕೈ ಪಾಲಾಗಿದೆ ಎನ್ನುವುದು ಸುದ್ದಿ. ಅದರ ಜೊತೆಗೆ ನಟ ರಾಕ್ಸ್ಟಾರ್ ಯಶ್ ಅವರು ವಾಲು ಚಿತ್ರದ ಕನ್ನಡ ಅವತರಣಿಕೆಯಲ್ಲಿ ನಟಿಸುತ್ತಿದ್ದಾರೆ.
ತಮಿಳಿನಲ್ಲಿ ಶಿಂಬು ಜೊತೆ ಅವರ  ಮಾಜಿ ಗರ್ಲ್ ಫ್ರೆಂಡ್ ಹನ್ಸಿಕಾ ಮೋಟ್ವಾನಿ ಅಭಿನಯಿಸಿದ್ದಳು, ನಮಗೆ ತಿಳಿದ ಮಾಹಿತಿಯಂತೆ ಆದಲ್ಲಿ ಯಶ್ ಜೊತೆ ಅವರ ಗರ್ಲ್ ಫ್ರೆಂಡ್ ರಾಧಿಕ ಪಂಡಿತ್ ನಿಶ್ಚಿತವಾಗಿ ಜೋಡಿ ಆಗ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ರಾಧಿಕ ಮತ್ತು ಯಶ್ ಅವರ ಜೋಡಿ ಉತ್ತಮ ಫಲಿತಾಂಶ ನೀಡಿದೆ. ಅವರ ನಟನೆಯ ಮಿಸ್ಟರ್ ಅಂಡ್ ಮಿಸೆಸ್  ರಾಮಾಚಾರಿ ಉತ್ತಮವಾದ ಫಲಿತಾಂಶ ನೀಡಿ ಅವರು ನಿರ್ಮಾಪಕರ ಮೆಚ್ಚಿನ ಜೋಡಿ ಆಗಿದ್ದಾರೆ. ಈ ಅಂಶಗಳ ಅಡಿಯಲ್ಲಿ ಈ ಜೋಡಿ ಈಗ ಮತ್ತೆ ಒಟ್ಟಿಗೆ ಕೆಲಸ ಮಾಡುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ..ನೋಡುವ ಕಾದು! ಏನಾಗುತ್ತದೆ ಎಂದು! 

ವೆಬ್ದುನಿಯಾವನ್ನು ಓದಿ