ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ
ಭಾನುವಾರ, 13 ಜನವರಿ 2019 (11:37 IST)
ಬೆಂಗಳೂರು: ಗಾಯದಿಂದಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ತವರಿಗೆ ಮರಳಿದ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ರಾಕಿಂಗ್ ಸ್ಟಾರ್ ಯಶ್ ಭೇಟಿಯಾಗಿದ್ದಾರೆ.
ಅಂಡರ್ 19 ವಿಶ್ವಕಪ್ ಗೆದ್ದ ಭಾರತ ಎ ತಂಡದ ನಾಯಕರೂ ಆಗಿರುವ ಪೃಥ್ವಿ ಶಾ ಗಾಯದ ಪುನಶ್ಚೇತನ ಕಾರ್ಯಕ್ಕೆ ಬೆಂಗಳೂರಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಯಶ್ ಯಾವತ್ತೂ ಉಳಿದುಕೊಳ್ಳುವ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಪೃಥ್ವಿ ಶಾ ಭೇಟಿ ಮಾಡಿದ್ದಾರೆ.
ಕೆಜಿಎಫ್ ನಂತರ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹೀಗಾಗಿ ಕೆಜಿಎಫ್ ಸ್ಟಾರ್ ನನ್ನು ಸ್ವತಃ ಪೃಥ್ವಿ ಶಾ ಭೇಟಿಯಾಗಿ ಕೆಲ ಹೊತ್ತು ಕಳೆದಿರುವುದು ವಿಶೇಷವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ