ನಿನ್ನ ಸನಿಹಕೆ ಸಿನಿಮಾಗೆ ಸಮಸ್ಯೆ: ಆಕ್ರೋಶ ಹೊರಹಾಕಿದ ರಘುದೀಕ್ಷಿತ್

ಶುಕ್ರವಾರ, 8 ಅಕ್ಟೋಬರ್ 2021 (17:13 IST)
ಬೆಂಗಳೂರು: ಸೂರಜ್-ಧನ್ಯಾ ರಾಮ್ ಕುಮಾರ್ ಅಭಿನಯದ ‘ನಿನ್ನ ಸನಿಹಕೆ’ ಸಿನಿಮಾ ಇಂದು ಬಿಡುಗಡೆಯಾಗಿದೆ. ಆದರೆ ಮೊದಲ ದಿನವೇ ಮೈನ್ ಥಿಯೇಟರ್ ಸಂತೋಷ್ ಚಿತ್ರಮಂದಿರದಲ್ಲಿ ಸಮಸ್ಯೆಯಾಗಿದ್ದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ.


ಈ ಬಗ್ಗೆ ಆಕ್ರೋಶ ಹೊರಹಾಕಿರುವ ಸಂಗೀತ ನಿರ್ದೇಶಕ ರಘು ದೀಕ್ಷಿತ್ ‘ಮೊದಲ ದಿನವೇ ಇಷ್ಟು ದೊಡ್ಡ ಸಮಸ್ಯೆ ಇಷ್ಟು ಸಣ್ಣ ಸಿನಿಮಾಗೆ ಹೊಡೆತ ತಡೆದುಕೊಳ್ಳಲು ಆಗಲ್ಲ. ಕಳೆದ ಮೂರು ದಿನಗಳಿಂದ ಇಲ್ಲಿ ಕರೆಂಟ್ ಇರಲಿಲ್ವಂತೆ. ಆದರೆ ನಮಗೆ ಯಾರಿಗೂ ಇದರ ಬಗ್ಗೆ ಮಾಹಿತಿ ಕೊಡಲಿಲ್ಲ. ಇದರಿಂದಾಗಿ ಬೆಳಗಿನ ಶೋ ರದ್ದಾಗಿದೆ.

ಎಲ್ಲರೂ ನವರಂಗ್ ಥಿಯೇಟರ್ ಗೆ ಬಂದು ಚಿತ್ರ ನೋಡಿ. ಇಂತಹ ಹೊಡೆತಗಳಾದರೆ ಚಿತ್ರ ನಿರ್ಮಾಪಕರಿಗೆ ದೊಡ್ಡ ನಷ್ಟವಾಗುತ್ತದೆ. ಇದರಿಂದ ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬರಲ್ಲ. ಕನಿಷ್ಠ ನಮಗೆ ತಾಂತ್ರಿಕ ಸಮಸ್ಯೆ ಬಗ್ಗೆ ಮಾಹಿತಿ ಕೊಡಬಹುದಿತ್ತು’ ಎಂದು ರಘುದೀಕ್ಷಿತ್ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ