ರಾಜಕೀಯಕ್ಕಾಗಿ ಸಿನಿಮಾಗೆ 3 ವರ್ಷ ಬ್ರೇಕ್ ಪಡೆದುಕೊಳ್ತಾರಾ ದಳಪತಿ ವಿಜಯ್?

ಮಂಗಳವಾರ, 4 ಜುಲೈ 2023 (15:52 IST)
ಚೆನ್ನೈ: ಸಿನಿಮಾ ಸ್ಟಾರ್ ಗಳು ರಾಜಕೀಯ ಅಖಾಡಕ್ಕಿಳಿಯುವುದು ಹೊಸತೇನಲ್ಲ. ಹಲವು ಸ್ಟಾರ್ ನಟರು ಈಗಾಗಲೇ ರಾಜಕೀಯದಲ್ಲಿ ಮಿಂಚುತ್ತಿದ್ದಾರೆ. ಈ ಸಾಲಿಗೆ ದಳಪತಿ ವಿಜಯ್ ಕೂಡಾ ಸೇರಿಕೊಳ್ಳುವ ಮಾತು ಕೇಳಿಬರುತ್ತಿದೆ.

ದಳಪತಿ ವಿಜಯ್ ಸಿನಿಮಾಗಳಿಂದ 3 ವರ್ಷ ಬ್ರೇಕ್ ಪಡೆದು ರಾಜಕೀಯ ಸೇರಿಕೊಳ್ಳುವುದಕ್ಕೆ ತಯಾರಿ ನಡೆಸಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

ಈಗ ಒಪ್ಪಿಕೊಂಡಿರುವ ಲಿಯೋ ಸಿನಿಮಾ ಮುಗಿದ ಬಳಿಕ ವಿಜಯ್ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಹೊಸ ಪಕ್ಷ ಅಥವಾ ಈಗ ಇರುವ ರಾಜಕೀಯ ಪಕ್ಷವೊಂದಕ್ಕೆ ಸೇರಲು ತಯಾರಿ ನಡೆಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ