ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನು ರದ್ದಾದ ಹಿನ್ನಲೆಯಲ್ಲಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳು ಮತ್ತೆ ಜೈಲು ಪಾಲಾಗಿದ್ದಾರೆ. ಇದೀಗ ಅವರಿಗೆ ಕೈದಿ ನಂಬರ್ ನೀಡಲಾಗಿದ್ದು, ಡಿಬಾಸ್ ಫ್ಯಾನ್ಸ್ ತಪ್ಪದೇ ಗಮನಿಸಿ.
ಕಳೆದ ಬಾರಿ ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಮತ್ತು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ಈ ಎರಡೂ ಜೈಲಿನಲ್ಲಿ ಅವರಿಗೆ ಪ್ರತ್ಯೇಕ ಕೈದಿ ನಂಬರ್ ನೀಡಲಾಗಿತ್ತು. ಆಗ ಫ್ಯಾನ್ಸ್ ದರ್ಶನ್ ಕೈದಿ ಸಂಖ್ಯೆಯನ್ನೇ ಟ್ಯಾಟೂ ಮಾಡಿ ಹಾಕಿಸಿಕೊಂಡು ಹುಚ್ಚು ಅಭಿಮಾನ ಮೆರೆದಿದ್ದರು.
ಇದೀಗ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಈಗ ಅವರಿಗೆ ಹೊಸದಾಗಿ ಕೈದಿ ಸಂಖ್ಯೆ ನೀಡಲಾಗಿದೆ. ಈಗ ದರ್ಶನ್ ಕೈದಿ ಸಂಖ್ಯೆ 7314. ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೈದಿ ಸಂಖ್ಯೆ 7313 ಆಗಿದೆ. ಉಳಿದಂತೆ ನಾಗರಾಜ್ ಗೆ 7315, ಲಕ್ಷ್ಮಣ 7316, ಪ್ರದೋಷ್ ಗೆ 7317 ಕೈದಿ ಸಂಖ್ಯೆ ನೀಡಲಾಗಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಡಿಬಾಸ್ ಫ್ಯಾನ್ಸ್ ಹೊಸ ಕೈದಿ ನಂಬರ್ ಟ್ಯಾಟೂ ಹಾಕಿಸಿಕೊಳ್ಳುತ್ತಾರಾ ನೋಡಬೇಕಿದೆ. ಮೈಮೇಲೆ ಮಾತ್ರವಲ್ಲ ತಮ್ಮ ಗಾಡಿಗಳಿಗೂ ಅದೇ ಕೈದಿ ನಂಬರ್ ಹಾಕಿಸಿಕೊಂಡು ಹುಚ್ಚಾಟ ಮೆರೆದಿದ್ದರು.