ಬೆಂಗಳೂರು :ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಚಿತ್ರಕ್ಕೆ ಇದೀಗ ಬುಡುಬುಡುಕೆ ಗೋಂದಳಿ ಸಮಾಜದಿಂದ ವಿರೋಧ ವ್ಯಕ್ತವಾಗಿದೆ.
ಹೌದು. ನಟ ವೈಭವ್ ಹಾಗೂ ನಟಿ ಮಾನ್ವಿತಾ ಹರೀಶ್ ಜೋಡಿಯಾಗಿ ನಟಿಸಿರುವ ತಾರಕಾಸುರ ಚಿತ್ರದ ಟ್ರೇಲರ್ ಹಾಗೂ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಆದರೆ ಈ ಸಿನಿಮಾ ಬುಡುಬುಡುಕೆ ಶಾಸ್ತ್ರ ಹೇಳುವ ವ್ಯಕ್ತಿಗೆ ಸಂಬಂಧಪಟ್ಟ ಸಿನಿಮವಾಗಿದ್ದರಿಂದ ಬುಡುಬುಡುಕೆ ಗೋಂದಳಿ ಸಮಾಜ ಚಿತ್ರದ ಬಿಡುಗಡೆಗೆ ಅಡ್ಡಗಾಲು ಹಾಕಿದೆ.
ಚಿತ್ರವನ್ನು ಮೊದಲು ನಮಗೆ ತೋರಿಸಿ. ಸಿನಿಮಾ ತೋರಿಸದೇ ಹೋದರೆ ಕೋರ್ಟ್ ಮೆಟ್ಟಿಲೇರಲು ಬುಡುಬುಡುಕೆ ಗೊಂದಳಿ ಸಮಾಜ ನಿರ್ಧಾರ ಮಾಡಿದೆ. ಚಿತ್ರತಂಡ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಈ ವಾರ ಸಿನಿಮಾ ಬಿಡುಗಡೆಯಾಗುವುದಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಸಂಘದ ಅಧ್ಯಕ್ಷ ಕರಿಯಪ್ಪ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.