ಜೀವಿತಾ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಶಿವ ಎಸ್.ಬಿ. ನಿರ್ಮಿಸಿರುವ “ತರ್ಲೆ ವಿಲೇಜ್” ಕಾಮಿಡಿ ಚಿತ್ರವು ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರಕ್ಕೆ ಸಿದ್ದೇಗೌಡ ಕಥೆ, ರಾಮು ನರಹಳ್ಳಿ ಛಾಯಾಗ್ರಹಣ, ವೀರಸಮರ್ಥ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ ಪ್ರಕಾಶ್, ಚಿಕ್ಕಪಾಳ್ಯ ಕಲೆಯಿದೆ.
ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ಕೆ.ಎಂ. ರಘು ಹೊತ್ತಿದ್ದಾರೆ. ತಾರಾಗಣದಲ್ಲಿ ಗಡ್ಡಪ್ಪ, ಸೆಂಚೂರಿಗೌಡ, ತಮ್ಮಣ್ಣ, ಅಭಿಷೇಕ್, ಹರ್ಷಿತಾ, ಭಾಗ್ಯಶ್ರೀ ಸೋಮು, ರಿಯಲ್ ಕೆಂಚ ರ ಜೊತೆಗೆ 70 ಕಲಾವಿದರು ಅಭಿನಯಿಸಿದ್ದಾರೆ.