ಬೆಂಗಳೂರು : ಸ್ಯಾಂಡಲ್ವುಡ್ನಟ, ಅಭಿಮಾನಿಗಳಿಂದ ಅಪ್ಪು ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಪುನೀತ್ ನಿಧನಕ್ಕೆ ದೇಶವೇ ಕಂಬನಿ ಮಿಡಿದಿದ್ದು, ಅಭಿಮಾನಿಗಳು ತೀವ್ರ ಶೋಕದಲ್ಲಿ ಮುಳುಗಿದ್ದಾರೆ.
ಪುನೀತ್ ರಾಜಕುಮಾರ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕಂಠೀರವ ಸ್ಟುಡಿಯೋದಲ್ಲಿ ನಾಳೆ (ಭಾನುವಾರ) ಪುನೀತ್ ಅಂತ್ಯಕ್ರಿಯೆ ನಡೆಯಲಿದೆ. ಡಾ.ರಾಜ್ ಹಾಗೂ ಪಾರ್ವತಮ್ಮ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಪುನೀತ್ ನಿಧನಕ್ಕೆ ದೇಶದ ವಿವಿಧ ಭಾಷೆಗಳ ಚಿತ್ರರಂಗಗಳು, ಕಲಾವಿದರು ಸಂತಾಪ ಸೂಚಿಸಿದ್ದಾರೆ. ಇಂದು ಅಂತಿಮ ದರ್ಶನ ಪಡೆಯಲು ಟಾಲಿವುಡ್ ನಟರು ಆಗಮಿಸುವ ನಿರೀಕ್ಷೆ ಇದೆ. ರಾಜ್ಯದ ವಿವಿದೆಡೆಯಿಂದ ಅಬಿಮಾನಿಗಳು ಆಗಮಿಸುತ್ತಿದ್ದು, ಕಂಠೀರವ ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರೈಲ್ವೆ ನಿಲ್ದಾಣ, ಮೆಜೆಸ್ಟಿಕ್ಗಳಲ್ಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕಾಗಿನೆಲೆ ಶ್ರೀಗಳು ನಿನ್ನೆ ರಾತ್ರಿ ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ.
ರಾತ್ರಿ ಮಳೆಯನ್ನೂ ಲೆಕ್ಕಿಸದೇ ಕಾದು, ಅಪ್ಪು ದರ್ಶನಕ್ಕೆ ತೆರಳುತ್ತಿರುವ ಅಭಿಮಾನಿಗಳು
ಅಭಿಮಾನಿಗಳು ಕಳೆದ 12 ಗಂಟೆಯಿಂದ ನಿರಂತರವಾಗಿ ದರ್ಶನ ಪಡೆಯುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ಅಭಿಮಾನಿಗಳು, ರಾತ್ರಿ ಮಳೆಯನ್ನು ಲೆಕ್ಕಿಸದೇ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಕಾಗಿನೆಲೆ ಶ್ರೀಗಳು ನಿನ್ನೆ ರಾತ್ರಿ ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ.