ಹಾಸನ : ನಾಡಿನ ಶಕ್ತಿದೇವತೆ, ಹಾಸನದ ಅಧಿದೇವತೆ ಹಾಸನಾಂಭೆಯ ದರ್ಶನಕ್ಕೆ ಬಾಗಿಲುಗಳು ಓಪನ್ ಆಗಿವೆ.
ಅರ್ಚಕರು ಪೂಜೆ ಸಲ್ಲಿಸಿ ಹಾಸನದ ಹಾಸನಾಂಬೆ ದೇಗುಲದ ಬಾಗಿಲು ಓಪನ್ ಮಾಡಿದ್ದಾರೆ. ಮೊದಲ ದಿನ ಆಹ್ವಾನಿತ ಗಣ್ಯರು, ಶಾಸಕರು, ಸಂಸದರು, ನಗರಸಭೆ ಸದಸ್ಯರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದ್ದು, ಇಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇಲ್ಲ. ನಾಳೆಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೂ ಸಹ ಸರತಿ ಸಾಲಿನಲ್ಲಿ ಭಕ್ತರು ನಿಂತು ದೇವಿಯ ದರ್ಶನಕ್ಕಾಗಿ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ.
12 ಗಂಟೆ 17 ನಿಮಷಕ್ಕೆ ಉಗೇ ಉಗೇ ಹಾಸನಾಂಬೆ ಘೋಷಣೆ ನಡುವೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ಓಪನ್ ಮಾಡಲಾಗಿದೆ. ಬನ್ನಿ ಕಡಿದು ಶುಭ ಮುಹೂರ್ತ ದಂದು ದರ್ಶನೋತ್ಸವಕ್ಕೆ ಚಾಲನೆ ನೀಡಲಾಗಿದೆ. ಆಧಿಚುಂಚನಗಿರಿ ಶ್ರೀಗಳಾದ ಡಾ.ನಿರ್ಮಲಾನಂದನಾಥ ಸ್ವಾಮಿಜಿಯವರ ಸಮ್ಮುಖದಲ್ಲಿ ಉಸ್ತುವಾರಿ ಸಚಿವ ಕೆಗೋಪಾಲಯ್ಯನವರ ನೇತೃತ್ವದಲ್ಲಿ ದೇಗುಲದ ಬಾಗಿಲು ತೆರೆಯಲಾಗಿದೆ.