ರಿಯಲ್ ಲೈಫ್ ನಲ್ಲಿ ಜೋಡಿಯಾಗಲಿದೆ ಕೋಸ್ಟಲ್ ವುಡ್ ನ ಖ್ಯಾತ ರೀಲ್ ಜೋಡಿ

Sampriya

ಶುಕ್ರವಾರ, 10 ಅಕ್ಟೋಬರ್ 2025 (21:49 IST)
Photo Credit X
ಪುಳಿಮುಂಜಿ ಮತ್ತು ಮಿಡಲ್ ಕ್ಲಾಸ್ ಫ್ಯಾಮಿಸಿ ಎಂಬ ಸೂಪರ್ ಹಿಟ್ ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ನಟವಿನೀತ್ ಕುಮಾರ್ ಹಾಗೂ ನಟಿ ಸಮತಾ ಅಮೀ‌ನ್ ರಿಯಲ್ ಲೈಫ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 

ನಿರೂಪಣೆ ಮೂಲಕ ಹೆಸರು ಗಳಿಸಿದ್ದ ವಿನೀತ್ ಕುಮಾರ್ ಅವರು 2014ರಲ್ಲಿ ರಂಗ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.  ಇನ್ನೂ ಇವರು ಕನ್ನಡದಲ್ಲಿ ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಸಹೋದರನ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. 

ಇವರ ರಾಜ್ ಲೈಟ್ಸ್ ಆಂಡ್ ಸೌಂಡ್ಸ್ ಸಿನಿಮಾ ತುಳು ಸಿನಿಮಾ ರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. 

ಇನ್ನೂ ಮುಂಬೈನಲ್ಲಿ ಹುಟ್ಟಿ ಬೆಳೆದ ಸಮತಾ ಅವರು ಡ್ಯಾನ್ಸರ್ ಆಗಿದ್ದರು. ಇವರು ಕೋಸ್ಟಲ್‌ವುಡ್‌ನಲ್ಲಿ ಹೆಸರು ಗಳಿಸಿದ ನಟಿಯರಲ್ಲಿ ಒಬ್ಬರಾಗಿದ್ದಾರೆ.  

ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ರಿಂಗ್ ಬದಲಾಯಿಸಿಕೊಂಡ, ಈ ಜೋಡಿ ಇದೇ ೧೨ರಂದು ಹಸೆಮಣೆ ಏರಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ