ವಿಶ್ವದಾಖಲೆಗಾಗಿ 72 ಲಕ್ಷ ಕೊಟ್ಟು ನಕಲಿ ವೀಕ್ಷಕರನ್ನು ಸೃಷ್ಠಿಸಿ ಸಿಕ್ಕಿಬಿದ್ದ ಗಾಯಕ

ಶನಿವಾರ, 15 ಆಗಸ್ಟ್ 2020 (22:06 IST)
ಗಾಯಕನೊಬ್ಬ ವಿಶ್ವದಾಖಲೆ ಮಾಡೋಕೆ ಅಂತ ಹೋಗಿ ಲಕ್ಷಾಂತರ ಹಣ ಖರ್ಚು ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಪಾಗಲ್ ಹೈ ಹಾಡಿನ ನಕಲಿ ವೀಕ್ಷಣೆಗಾಗಿ ತಾನು 72 ಲಕ್ಷ ರೂ. ಪಾವತಿಸಿದ್ದೇನೆ ಎಂದು ಬಾದಶಾ ಒಪ್ಪಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ರಾಪರ್ ಬಾದ್‌ ಶಾ ರೂ. ಪಾಗಲ್ ಹೈ ಅವರ ಮ್ಯೂಸಿಕ್ ವಿಡಿಯೋದಲ್ಲಿ ಹೆಚ್ಚುವರಿ ವೀಕ್ಷಣೆಗಾಗಿ 72 ಲಕ್ಷ ರೂ. ಪಾವತಿಸಿರುವುದು ಬಯಲಾಗಿದೆ.

ಮೊದಲ ದಿನವೇ ಈ ಸಿಂಗಲ್ ವಿಡಿಯೋವನ್ನು 75 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಈ ಹಿಂದೆ ಟೇಲರ್ ಸ್ವಿಫ್ಟ್ ಮತ್ತು ಕೊರಿಯನ್ ಬಾಯ್ ಬ್ಯಾಂಡ್ ಬಿಟಿಎಸ್ ದಾಖಲಿಸಿದ್ದ ದಾಖಲೆಗಳನ್ನು ಸೋಲಿಸಿತ್ತು. ಆದಾಗ್ಯೂ, ಸೈಬರ್ ಸೆಲ್ ನೈಜ ಚಿತ್ರಣವನ್ನು ತನಿಖೆ ಮಾಡಿ ಬಯಲಿಗೆ ಎಳೆದಿದೆ.

“ಯೂಟ್ಯೂಬ್‌ನಲ್ಲಿ 24 ಗಂಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಕರಿಗೆ ತಲುಪಿಸಿ ವಿಶ್ವ ದಾಖಲೆ ನಿರ್ಮಿಸಲು ತಾನು ಬಯಸುತ್ತೇನೆ ಎಂದು ಗಾಯಕ ಒಪ್ಪಿಕೊಂಡಿದ್ದಾನೆ. ಅದಕ್ಕಾಗಿಯೇ ಅವರು ಕಂಪನಿಗೆ 72 ಲಕ್ಷ ರೂ. ಪಾವತಿಸಿದ್ದಾಗಿ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ