ಶೂಟಿಂಗ್ ಜೊತೆಗೆ ತಮ್ಮ ರಾಜಕೀಯ ಪಕ್ಷದ ಕಡೆಗೂ ಗಮನ ಹರಿಸಿದ ಟಾಲಿವುಡ್ ಸ್ಟಾರ್
ಬುಧವಾರ, 11 ನವೆಂಬರ್ 2020 (11:04 IST)
ಹೈದರಾಬಾದ್ : ಟಾಲಿವುಡ್ ನ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಇದೀಗ ವೇಣು ಶ್ರೀರಾಮ್ ನಿರ್ದೇಶನದ ವಕೀಲ್ ಸಾಬ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಅವರು ತಮ್ಮ ರಾಜಕೀಯ ಪಕ್ಷ ಜನಸೇನಾ ಪಾರ್ಟಿಯ ಕಾರ್ಯಕ್ರಮದಲ್ಲಿಯೂ ತೊಡಗಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕೊರೊನಾದಿಂದ ಸ್ಥಗಿತಗೊಂಡ ಚಿತ್ರದ ಶೂಟಿಂಗ್ ಶುರುವಾಗಿದ್ದು, ಪವನ್ ಕಲ್ಯಾಣ ಮತ್ತೆ ಶೂಟಿಂಗ್ ಸೆಟ್ ಗೆ ತೆರಳಿದ್ದಾರೆ. ಆದರೆ ಅವರು ಕಳೆದ 8ತಿಂಗಳಿನಿಂದ ತಮ್ಮ ರಾಜಕೀಯ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ದೂರವಿದ್ದ ಹಿನ್ನಲೆಯಲ್ಲಿ ಎಲ್ಲರೂ ಅವರನ್ನು ಭೇಟಿ ಮಾಡಲು ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ. ಆದಕಾರಣ ನಟ ಪವನ್ ಕಲ್ಯಾಣ್ ಚಲನಚಿತ್ರ ಹಾಗೂ ರಾಜಕೀಯ ಪಕ್ಷ ೆರಡರಲ್ಲೂ ನಿರತರಾಗಿದ್ದಾರೆ ಎನ್ನಲಾಗಿದೆ.