ಸರ್ಕಾರ ಅನುಮತಿ ಕೊಟ್ಟರೂ ಥಿಯೇಟರ್ ಓಪನ್ ಇಲ್ಲ

ಮಂಗಳವಾರ, 20 ಜುಲೈ 2021 (08:45 IST)
ಬೆಂಗಳೂರು: ರಾಜ್ಯ ಸರ್ಕಾರವೇನೋ ಅನ್ ಲಾಕ್ 4.0 ರಲ್ಲಿ ಚಿತ್ರಮಂದಿರಗಳನ್ನು ಶೇ.50 ರಷ್ಟು ಹಾಜರಾತಿಯೊಂದಿಗೆ ತೆರೆಯಲು ಅನುಮತಿ ಕೊಟ್ಟಿದೆ.


ಆದರೆ ಸರ್ಕಾರ ಅನುಮತಿ ಕೊಟ್ಟರೂ ಸದ್ಯಕ್ಕೆ ಚಿತ್ರಮಂದಿರಗಳು ತೆರೆಯದು. ಇದಕ್ಕೆ ಕಾರಣ ಕಳೆದ ಹಲವು ದಿನಗಳಿಂದ ಥಿಯೇಟರ್ ಗಳು ಬಾಗಿಲು ಮುಚ್ಚಿ ಕೂತಿತ್ತು. ಈಗ ಶುಚಿತ್ವ, ಸ್ಯಾನಿಟೈಸೇಷನ್ ಕೆಲಸಗಳು ನಡೆಯಬೇಕಿದೆ.

ಅದೂ ಅಲ್ಲದೆ, ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ಕೊಟ್ಟಿರುವುದರಿಂದ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಲ್ಲ. ಹೀಗಾಗಿ ಶೇ.100 ಪ್ರೇಕ್ಷಕರಿಗೆ ಅವಕಾಶ ಕೊಡುವವರೆಗೂ ಥಿಯೇಟರ್ ಪೂರ್ಣ ಪ್ರಮಾಣದಲ್ಲಿ ತೆರೆಯುವುದು ಅನುಮಾನ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ