ಚಿತ್ರರಂಗ ತೆರೆಯಲು ಅನುಮತಿ: ಚಿತ್ರರಂಗಕ್ಕೆ ಸಮಾಧಾನ

ಸೋಮವಾರ, 19 ಜುಲೈ 2021 (09:35 IST)
ಬೆಂಗಳೂರು: ಅನ್ ಲಾಕ್ 4.0 ರಲ್ಲಿ ರಾಜ್ಯ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿರುವುದು ಚಿತ್ರರಂಗಕ್ಕೆ ಸಿಕ್ಕ ಆಶ್ವಾಸನೆಯಾಗಿದೆ.


ಮೊದಲ ಹಂತದಲ್ಲಿ ಶೇ.50 ಪ್ರೇಕ್ಷಕರ ಹಾಜರಾತಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಾಗಿದ್ದರೂ ಇದು ಬಿಡುಗಡೆ ಮಾಡಲು ಕಾದು ಕುಳಿತಿರುವ ಚಿತ್ರ ನಿರ್ಮಾಪಕರಿಗೆ ಕೊಂಚ ಸಮಾಧಾನಕರ ವಿಚಾರ.

ಬಿಗ್ ಸ್ಟಾರ್ ಸಿನಿಮಾಗಳು ಶೇ.100 ಪ್ರೇಕ್ಷಕರಿಗೆ ಅನುಮತಿಯಿಲ್ಲದೇ ಬಿಡುಗಡೆಯಾಗಲ್ಲ ಎಂದು ಈಗಾಗಲೇ ಪಕ್ಕಾ ಆಗಿದೆ. ಮೊದಲ ಹಂತದಲ್ಲಿ ಸಣ್ಣ ಬಜೆಟ್ ನ ಸಿನಿಮಾಗಳು, ಈಗಾಗಲೇ ರಿಲೀಸ್ ಆಗಿದ್ದ ಸಿನಿಮಾಗಳು ರಿ ರಿಲೀಸ್ ಆಗುವ ಸಾಧ್ಯತೆಯಿದೆ. ಮುಂದಿನ ಹಂತದಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ಸಿಗುವ ಭರವಸೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ