ರಮ್ಯಾ-ರಾಜ್ ಬಿ ಶೆಟ್ಟಿ ಮುನಿಸು ಮರೆತಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ!

ಗುರುವಾರ, 26 ಅಕ್ಟೋಬರ್ 2023 (09:00 IST)
ಬೆಂಗಳೂರು: ಹಾಸ್ಟೆಲ್ ಹುಡುಗರು ರಿಲೀಸ್ ಸಮಯದಲ್ಲಿ ರಮ್ಯಾ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದಾಗ ರಾಜ್ ಬಿ ಶೆಟ್ಟಿ ರಮ್ಯಾ ಮೇಲೆ ಅಸಮಾಧಾನ ಹೊರಹಾಕಿದ್ದರು.

ಪರೋಕ್ಷವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಟಾಂಗ್ ಕೊಟ್ಟಿದ್ದರು. ಇಬ್ಬರ ನಡುವೆ ಅಂದಿನಿಂದ ಶೀತಲ ಸಮರ ನಡೆಯುತ್ತಲೇ ಇದೆ. ಇದೀಗ ರಮ್ಯಾ ನಿರ್ಮಿಸಿರುವ ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುವಾಗಲೂ ಅದು ಮುಂದುವರಿದಿದೆ.

ನವಂಬರ್ 24 ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಬಗ್ಗೆ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡದವರನ್ನು ಟ್ಯಾಗ್ ಮಾಡಿ ಘೋಷಣೆ ಮಾಡಿದ್ದಾರೆ. ಆದರೆ ಇಬ್ಬರೂ ಪರಸ್ಪರರ ಹೆಸರುಗಳನ್ನು ಮಾತ್ರ ಟ್ಯಾಗ್ ಮಾಡಿರಲಿಲ್ಲ. ಇದನ್ನು ನೋಡಿದರೆ ಇಬ್ಬರೂ ಮುನಿಸು ಮರೆತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದರೆ ಮುಂದೆ ಮಾಧ್ಯಮಗಳ ಮುಂದೆ ಚಿತ್ರದ ಪ್ರಚಾರಾರ್ಥವಾಗಿ ಒಟ್ಟಿಗೇ ಕಾಣಿಸಿಕೊಳ್ಳುವ ಸಂದರ್ಭ ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ