ರಾಮ್ ಚರಣ್ ಕುರಿತಾದ ಈ ಸುದ್ದಿ ಸುಳ್ಳಂತೆ!

ಮಂಗಳವಾರ, 13 ಏಪ್ರಿಲ್ 2021 (09:55 IST)
ಹೈದರಾಬಾದ್ : ನಟ ರಾಮ್ ಚರಣ್ ಅವರು ಜರ್ಸಿ ಖ್ಯಾತಿಯ ಗೌತಮ್ ತಿನ್ನನುರಿ ರಚಿಸಿದ ಮುದ್ದಾದ ಪ್ರೇಮಕಥೆಯಿಂದ ಪ್ರಭಾವಿತರಾಗಿದ್ದು. ಈ ಯೋಜನೆಗೆ ಅನುಮತಿ ನೀಡಿದ್ದಾರೆ ಎಂದು ಇತ್ತೀಚೆಗೆ ಹೇಳಲಾಗಿತ್ತು.

ಆದರೆ  ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಈ ಬಗ್ಗೆ ಗೌತಮ್ ತಿನ್ನನುರಿ ಅವರ ಬಳಿ ಕೇಳಿದಾಗ, ಈ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಜರ್ಸಿ ರಿಮೇಕ್ ನ ಬಳಿಕ ನಾನು ಯಾವುದೇ ತೆಲುಗು ನಾಯಕನ ಜೊತೆ ಚಿತ್ರ ಮಾಡುತ್ತಿಲ್ಲ. ತೆಲುಗು ನಾಯಕರಿಗಾಗಿ ನಿರೂಪಿಸಿಲು ನನ್ನ ಬಳಿ ಯಾವುದೇ ಕಥೆಗಳಿಲ್ಲ ಎಂದು ಹೇಳಿದ್ದಾರೆ.

ಗೌತಮ್ ತಿನ್ನನುರಿ ಅವರು ಪ್ರಸ್ತುತ ಜರ್ಸಿ ರಿಮೇಕ್ ಆಗಿರುವ ತಮ್ಮ ಮುಂಬರುವ ಯೋಜನೆಯಲ್ಲಿ ನಿರತರಾಗಿದ್ದಾರೆ, ಮತ್ತು ಶೀಘ್ರದಲ್ಲಿಯೇ ಶಾಹಿದ್ ಕಪೂರ್ ಅಭಿನಯದ ಕ್ರೀಡಾ ಆಧಾರಿತ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ