ನಾನಿ ಅಭಿನಯದ ಟಕ್ ಜಗದೀಶ್ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಿಕೆ

ಸೋಮವಾರ, 12 ಏಪ್ರಿಲ್ 2021 (12:46 IST)
ಹೈದರಾಬಾದ್ : ಟಕ್ ಜಗದೀಶ್  ನಾನಿ ಅಭಿನಯದ ಮುಂದಿನ ಚಿತ್ರವಾಗಿದ್ದು, ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಇದೀಗ ಮುಂದೂಡಿದ್ದಾರೆ.

ಹೌದು. ಈ ಚಿತ್ರವನ್ನು ಏಪ್ರಿಲ್ 23ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ಚಿತ್ರತಂಡ ಹಲವು ದಿನಗಳಿಂದ ಪ್ರಚಾರ ಕೂಡ ಮಾಡುತ್ತಿದೆ. ಆದರೆ ಇದೀಗ  ಕೊರೊನಾ, ಲಾಕ್ ಡೌನ್ ಕಾರಣಗಳಿಂದ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗಿದೆ.

ಈಗಾಗಲೇ ಕೊರೊನಾ ಕಾರಣದಿಂದ ಈ ಚಿತ್ರ ಮಾತ್ರವಲ್ಲ, ನಾಗಚೈತನ್ಯ ಲವ್ ಸ್ಟೋರಿ ಚಿತ್ರ, ಕಂಗನಾ ಅವರ ತಲೈವಿ ಚಿತ್ರ, ಚಿರಂಜೀವಿ ಅವರ ಆಚಾರ್ಯ ಚಿತ್ರವನ್ನು ಕೂಡ ಮುಂದೂಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ