ಧೂಮಂನಲ್ಲಿ ಫಹಾದ್ ಫಾಸಿಲ್ ಪಾತ್ರವನ್ನು ಕನ್ನಡದ ಈ ಸ್ಟಾರ್ ಮಾಡಬೇಕಿತ್ತು!

ಬುಧವಾರ, 14 ಜೂನ್ 2023 (08:40 IST)
ಬೆಂಗಳೂರು: ಕನ್ನಡ ನಿರ್ದೇಶಕ ಪವನ್ ಕುಮಾರ್ ನಿರ್ದೇಶನದ ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ಧೂಮಂ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಲೂಸಿಯಾದಂತಹ ಅದ್ಭುತ ಸಿನಿಮಾ ನೀಡಿದ ಪವನ್ ಕುಮಾರ್ ಈಗ ಮತ್ತೊಂದು ಮಾಸ್ಟರ್ ಪೀಸ್ ರೆಡಿ ಮಾಡಿದ್ದಾರೆ. ಹಣ ಗಳಿಸಲು ಹೋಗಿ ನಾಯಕ ಟ್ರ್ಯಾಪ್ ಆಗುವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಸಿನಿಮಾ ಧೂಮಂ.

ಈ ಸಿನಿಮಾದಲ್ಲಿ ನಾಯಕರಾಗಿ ಮಲಯಾಳಂ ಮೂಲದ ನಟ ಫಹಾದ್ ಫಾಸಿಲ್ ನಟಿಸಿದ್ದಾರೆ. ಆದರೆ ಅಸಲಿಗೆ ಈ ಸಿನಿಮಾವನ್ನು ಗೋಲ್ಡನ್ ಸ್ಟಾರ್ ಗಣೇಶ್ ಮಾಡಬೇಕಿತ್ತು. ಆದರೆ ಕೊನೆಗೆ ಫಹಾದ್ ಪಾಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ