ಶ್ರೀಮುರಳಿ ಬಘೀರಗೆ ಫಹಾದ್ ಫಾಸಿಲ್ ಎಂಟ್ರಿ?

ಶುಕ್ರವಾರ, 27 ಜನವರಿ 2023 (09:20 IST)
Photo Courtesy: Twitter
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕರಾಗಿರುವ ಬಘೀರ ಸಿನಿಮಾ ತಂಡದ ಕಡೆಯಿಂದ ಹೊಸ ಸುದ್ದಿಯೊಂದು ಕೇಳಿಬರುತ್ತಿದೆ.

ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರುವ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಫಹಾದ್ ಫಾಸಿಲ್ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಪುಷ್ಪ, ವಿಕ್ರಂ ಖ್ಯಾತಿಯ ಮಲಯಾಳಂ ನಟ ಫಹಾದ್ ಬಘೀರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಬಘೀರ ಸಿನಿಮಾಗೆ ಕತೆ ಬರೆದಿರುವುದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್. ಈ ಸಿನಿಮಾಗೆ ಡಾ. ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುತಾರಾಗಣ ಸಿನಿಮಾದಲ್ಲಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ