ಕೆಜಿಎಫ್ 3 ರಲ್ಲಿ ಯಶ್ ಗೆ ಜೊತೆಯಾಗ್ತಾರಂತೆ ಈ ತಮಿಳು ಸ್ಟಾರ್ ನಟ

Krishnaveni K

ಬುಧವಾರ, 24 ಜುಲೈ 2024 (13:58 IST)
ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಕೆಜಿಎಫ್ 3 ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ತಮಿಳಿನ ಖ್ಯಾತ ನಟ ಪರದೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಭಾರೀ ಟ್ರೆಂಡ್ ಆಗಿದೆ.
 
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಿಸಿದ್ದ ಕೆಜಿಎಫ್ 1, ಕೆಜಿಎಫ್ 2 ಭಾರೀ ಹಿಟ್ ಆಗಿತ್ತು. ಇದು ಕೇವಲ ಯಶ್ ಮಾತ್ರವಲ್ಲ, ಕನ್ನಡ ಸಿನಿಮಾ ಮಾರುಕಟ್ಟೆಯನ್ನೇ ಪ್ರಪಂಚದಾದ್ಯಂತ ಹರಡುವ ಹಾಗೆ ಮಾಡಿತ್ತು. ಪ್ರಶಾಂತ್ ನೀಲ್ ಕೆಜಿಎಫ್ 3 ಕೂಡಾ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ.

ಕೆಜಿಎಫ್ 3 ಸ್ಕ್ರಿಪ್ಟ್ ಕೆಲಸಗಳನ್ನೂ ಮಾಡಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಸದ್ಯಕ್ಕೆ ಯಶ್ ಟಾಕ್ಸಿಕ್  ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಯಶ್ ಕೆಜಿಎಫ್ 3 ಸಿನಿಮಾದಲ್ಲಿ ನಟಿಸಲಿದ್ದಾರೆ  ಎಂಬ ಸುದ್ದಿಯಿದೆ. ಇದರ ನಡುವೆ ಕೆಜಿಎಫ್ 3 ರಲ್ಲಿ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಕೂಡಾ ನಟಿಸಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಟ್ ಆಗಿದೆ.

ಯಶ್ ರಂತೇ ಅಜಿತ್ ಕೂಡಾ ಸಾಹಸ ಕತೆಗಳಿರುವ ಸಿನಿಮಾಗಳಿಗೆ ಹೆಸರು ವಾಸಿ. ಮೊದಲು ಅಜಿತ್ ಸೋಲೋ ಹೀರೋ ಆಗಿರುವ ಸಿನಿಮಾಗೆ ಪ್ರಶಾಂತ್ ಆಕ್ಷನ್ ಕಟ್ ಹೇಳಲಿದ್ದಾರಂತೆ. ಅದಾದ ಬಳಿಕ ಕೆಜಿಎಫ್ 3 ರಲ್ಲೂ ಅಜಿತ್ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಇದು ಯಶ್-ಅಜಿತ್ ಅಭಿಮಾನಿಗಳಲ್ಲಿ ಪುಳಕವುಂಟು ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ