ಮೂರು ತಿಂಗಳಲ್ಲಿ ಮೂರು ಬಿಗ್ ಸಿನಿಮಾ: ಈಗ ಸ್ಯಾಂಡಲ್ ವುಡ್ ನದ್ದೇ ಹವಾ

ಶನಿವಾರ, 14 ಮೇ 2022 (11:28 IST)
ಬೆಂಗಳೂರು: ಮಾರ್ಚ್, ಏಪ್ರಿಲ್, ಜುಲೈ..ಹೀಗೆ ಮೂರು ತಿಂಗಳು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಯಾಂಡಲ್ ವುಡ್ ನದ್ದೇ ಹವಾ ಎಂಬಂತಾಗಿದೆ.

ಮಾರ್ಚ್ ನಲ್ಲಿ ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಯಾಗಿ ದಾಖಲೆಯ ಗಳಿಕೆ ಮಾಡಿತ್ತು. ಕನ್ನಡ ಚಿತ್ರರಂಗದಲ್ಲೇ ಮಾಡದ ದಾಖಲೆ ಈ ಸಿನಿಮಾ ಮಾಡಿ 100 ಕೋಟಿ ರೂ. ಕ್ಲಬ್ ಸೇರಿತ್ತು.

ಏಪ್ರಿಲ್ ನಲ್ಲಿ ಕೆಜಿಎಫ್ 2 ಬಿಡುಗಡೆಯಾಗಿತ್ತು. ಈ ಸಿನಿಮಾವೂ ವಿಶ್ವದಾದ್ಯಂತ ಬಿಡುಗಡೆಯಾಗಿ 1000 ಕೋಟಿ ರೂ.ಗಳ ಭರ್ಜರಿ ಯಶಸ್ಸು ಕಂಡಿದೆ. ಕೆಜಿಎಫ್ 2 ನಿಂದಾಗಿ ಬೇರೆ ಭಾಷೆಯ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆ ಮಾಡಲೂ ಹಿಂಜರಿಯುವ ಸ್ಥಿತಿ ಉಂಟಾಗಿತ್ತು.

ಇನ್ನು ಜುಲೈ ತಿಂಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಯಾಗಲಿದೆ. ಈ ಸಿನಿಮಾವೂ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, 3ಡಿ ಅವತರಣಿಕೆಯಿಂದಾಗಿ ಬಹುಭಾಷೆಗಳಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಹೀಗಾಗಿ ಈ ಮೂರು ತಿಂಗಳು ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳದ್ದೇ ಕಾರು ಬಾರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ