ಬಾಲ್ಯದ ಗೆಳೆಯನ ಮದುವೆಗೆ ಬಂದ ರಾಕಿಂಗ್ ಸ್ಟಾರ್ ಯಶ್ ದಂಪತಿ
ಮೈಸೂರಿನ ಕಲ್ಯಾಣಮಂಟಪವೊಂದರಲ್ಲಿ ನಿನ್ನೆ ರಾತ್ರಿ ನಡೆದ ಮದುವೆ ಕಾರ್ಯಕ್ರಮಕ್ಕೆ ಯಶ್-ರಾಧಿಕಾ ಆಗಮಿಸಿ ವಧು-ವರರಿಗೆ ಶುಭ ಕೋರಿದರು. ಯಶ್ ಬಾಲ್ಯದ ಸ್ನೇಹಿತ ಚೇತನ್ ಮದುವೆ ಇಲ್ಲಿ ನಿಗದಿಯಾಗಿತ್ತು.
ಈ ಮದುವೆ ಸಮಾರಂಭಕ್ಕೆ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕೂಡಾ ಆಗಮಿಸಿದ್ದರು. ಯಶ್-ರಾಧಿಕಾ ಮದುವೆ ಮನೆಗೆ ಆಗಮಿಸುತ್ತಿದ್ಧಂತೇ ಜನ ಅವರನ್ನು ನೋಡಲು ನೂಕು ನುಗ್ಗಲು ನಡಸಿದರು.