ಕಣ್ಮರೆಯಾಗಿದ್ದರೂ ಪುತ್ರನ ಸಿನಿಮಾದಲ್ಲಿ ನಟಿಸಲು ಟೈಗರ್ ಪ್ರಭಾಕರ್ ಸಿದ್ಧ

ಬುಧವಾರ, 29 ಏಪ್ರಿಲ್ 2015 (10:07 IST)
ಟೈಗರ್ ಪ್ರಭಾಕರ್ ಅವರು ಕನ್ನಡ ಚಿತ್ರರಂಗದ ನಟ ಮಾತ್ರವಲ್ಲ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸಹಿತ ಎಲ್ಲರ ಅಭಿಮಾನ ಗಳಿಸಿದ ಮೇರು ನಟ. ಅವರು ಮರಣಿಸಿ ಈಗಾಗಲೇ ಹದಿನಾಲ್ಕು ವರ್ಷಗಳಾಗಿವೆ. ಆದರೆ ಅವರು ಮತ್ತೊಮ್ಮೆ ತಮ್ಮ ಮಗ ವಿನೋದ್ ಪ್ರಭಾಕರ್ ನಟನೆಯ ಟೈಸನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸತ್ತವರು ಹೇಗೆ ಮತ್ತೆ ನಟಿಸುತ್ತಾರೆ ಎನ್ನುವ ಪ್ರಶ್ನೆ ಕಾಡಬಹುದು, ಆದರೆ ಅದರ ಬಗ್ಗೆ ವಿವರವಾಗಿ ನಾವು ಹೇಳ್ತೀವಿ. ವಿನೋದ್ ಪ್ರಭಾಕರ್ ಅವರ ಹೊಸ ಚಿತ್ರ ಟೈಸನ್‌ನಲ್ಲಿ ಪ್ರಭಾಕರ್ ನಟನೆಯ ಚಿತ್ರಗಳ ದೃಶ್ಯಗಳನ್ನು ಸೇರ್ಪಡೆ ಮಾಡುತ್ತಾರಂತೆ. 
ತನ್ನ ತಂದೆ ನಟನೆಯ ಅನೇಕ ದೃಶ್ಯಗಳನ್ನು ಈ ಚಿತ್ರದಲ್ಲಿ ಬಳಕೆ ಮಾಡಿಕೊಳ್ಳುವುದರ ಮೂಲಕ ಸಿನಿಮಾಕ್ಕೆ ಹೊಸ ರೂಪ ನೀಡುತ್ತಿದ್ದಾರೆ ಚಿತ್ರತಂಡ. ವಿಭಿನ್ನ ಕಥಾಹಂದರ, ಸಂಭಾಷಣೆಯನ್ನು ಈ ಚಿತ್ರ ಹೊಂದಿದೆಯಂತೆ. 
 
ಈ ಚಿತ್ರವನ್ನು ರಾಮ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ದಿವಂಗತ ಪ್ರಭಾಕರ್ ಅವರು ಮುಖ್ಯಪಾತ್ರದಲ್ಲಿ ಕಂಡು ಬರುತ್ತಿದ್ದಾರಂತೆ. ಈ ಚಿತ್ರದಲ್ಲಿ ವಿನಯಾ ಪ್ರಸಾದ್ ತಾಯಿ ಪಾತ್ರಧಾರಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ