ನಟ ಜಗ್ಗೇಶ್ ಟ್ವೀಟ್ ಮೂಲಕ ಜನರಲ್ಲಿ ಮನವಿ ಮಾಡಿರುವುದು ಯಾರಿಗೋಸ್ಕರ…?

ಗುರುವಾರ, 5 ಏಪ್ರಿಲ್ 2018 (07:30 IST)
ಬೆಂಗಳೂರು : ‘ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ನನ್ ಮಕ್ಳು’ ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಟ ನಿರೂಪ್ ಭಂಡಾರಿ ಹೇಳಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೀಗ ನಟ ಜಗ್ಗೇಶ್ ಅವರು ಭಂಡಾರಿ ಸಹೋದರರ ಪರವಾಗಿ ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.


ಈ ಘಟನೆಯ ಬಗ್ಗೆ ನಟ ಜಗ್ಗೇಶ್ ಅವರು ಟ್ವೀಟರ್ ನಲ್ಲಿ ,’ನಲ್ಮೆಯ ಮಿತ್ರರೆ, ಭಂಡಾರಿ ಬ್ರದರ್ಸ್ ಬಹಳ ಮುಗ್ದರು. ವೈಯಕ್ತಿಕವಾಗಿ ತಂದೆ ಮಕ್ಕಳು ಇಬ್ಬರು ಪರಿಚಯ. ಅಂದು ಅವರು ಮಾತಾಡಿದ್ದೆಲ್ಲಾ ತಮಾಷೆ ಹರಟೆಯ ನಿರೂಪಣೆ ಸಮಯದಲ್ಲಿ ಆದ ಅವಘಡ. ಉದ್ದೇಶಪೂರ್ವಕ ಅಲ್ಲಾ. ನಮ್ಮ ಉದ್ಯಮದ ಪ್ರತಿಯೊಬ್ಬರು ಅನ್ನದಾತರನ್ನು ಗೌರವಿಸುತ್ತಾರೆ. ವಿಶಾಲ ಹೃದಯದಿಂದ ವಿಮರ್ಷಿಸಿ ಮರೆತುಬಿಡಿ. ಉದ್ಯಮದ ಹಿರಿಯನಾಗಿ ಹೃದಯದ ಪ್ರಾರ್ಥನೆ’ ಎಂದು ಟ್ವೀಟ್ ಮೂಲಕ ಮನವಿ ಸಲ್ಲಿಸಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ