ರಾಜ್ಯಾದ್ಯಂತ ಇಂದು ಮೂರು ಚಿತ್ರಗಳ ಬಿಡುಗಡೆ

ಶುಕ್ರವಾರ, 6 ಮಾರ್ಚ್ 2015 (10:15 IST)
ಇಂದು ಮೂರು ಚಿತ್ರಗಳು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದ್ದು, ತರುಣ್, ಕೋಮಲ್, ಶ್ರೀಕಿ ಅಭಿನಯದ ಗೋವಾ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಹಾಸ್ಯ ರಸಭರಿತ ಅಂಶಗಳನ್ನು ಒಳಗೊಂಡಿರುವ ಗೋವಾ ಚಿತ್ರದಲ್ಲಿ ಬಹಳ ದಿನಗಳ ನಂತರ ಕನ್ನಡತಿ ಶರ್ಮಿಳಾ ಮಾಂಡ್ರೆ ಅವರು ಸಹ ನಟಿಸಿದ್ದಾರೆ. ಈ ಚಿತ್ರದಲ್ಲಿ ಸೋನು ಗೌಡ ಮತ್ತು ರಚೆಲ್ ಈ ಹೀರೋಗಳ ಜೊತೆಯಾಗಿದ್ದಾರೆ. ಚಿತ್ರವನ್ನು ಸೂರ್ಯ ನಿರ್ದೇಶನ ಮಾಡಿದ್ದಾರೆ. ಇದು ರೀಮೇಕ್ ಚಿತ್ರವಾದರೂ ಎಲ್ಲಿಯೂ ನೇಟಿವಿಟಿಗೆ ಕೊರತೆ ಆಗಿಲ್ಲವಂತೆ. ಹಾಗೆಂದು ನಿರ್ದೇಶಕರು ಹೇಳಿದ್ದಾರೆ. ಇದರಲ್ಲಿ ಅಶೋಕ್, ಕರಿಸುಬ್ಬು, ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರುವ ಗೋವಾ ಚಿತ್ರಕ್ಕೆ ರಾಜೇಶ್ ಛಾಯಾಗ್ರಹಣ, ಪಾಪು ಎಸ್ ಸಂಕಲನ ಹಾಗೂ ಮುರುಳಿ, ನಿಕ್ಸನ್ ಅವರ ನೃತ್ಯ ನಿರ್ದೇಶನವಿದೆ. 
ಕ್ರೈಮ್ ಸಹಿತ ನಮ್ಮ ಕನ್ನಡ ನಿರ್ದೇಶಕರಿಗೆ ರೊಮ್ಯಾಂಟಿಕ್ ಆಗಿರುತ್ತದೆ ಎನ್ನುವ ಸಂಗತಿ ಈಗ ತಿಳಿದು ಬಂದಿದೆ. ಒಂದು  ರೊಮ್ಯಾಂಟಿಕ್ ಕ್ರೈಮ್ ಕಥೆ ಹೆಸರಿನ ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಮಲಿನೇನಿ ಲಕ್ಷ್ಮಯ್ಯ ಅವರ ನಿರ್ಮಾಣದ ಈ ಚಿತ್ರವನ್ನು ಚೈತನ್ಯ ನಿರ್ದೇಶನ ಮಾಡಿದ್ದಾರೆ. ಗೊಂಬೆಗಳ ಲವ್ ಚಿತ್ರದಲ್ಲಿ ನಟಿಸಿದ್ದ ಅರುಣ್ ಇದರ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಪೂಜಾಶ್ರೀ, ಸೋನಾಲ್, ಅಶ್ವಿನಿ ಇನ್ನಿತರ ಕಲಾವಿದೆಯರಾಗಿದ್ದಾರೆ. ಪ್ರಭು ಕ್ಯಾಮರಾ ವರ್ಕ್ ಇರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಗೀತ ರಚನೆಯನ್ನು ಡಾ.ನಾಗೇಂದ್ರ ಪ್ರಸಾದ್ ಅವರು ಮಾಡಿದ್ದಾರೆ. ಎ.ಕೆ. ರಿಶಾಲ್ ಸಾಯಿ ಸಂಗೀತ ನಿರ್ದೇಶನವಿದೆ. ಹೆಸರೇ ಫ್ಲಾಪ್.. 
 
ವಿಚಿತ್ರವಾದ ಹೆಸರು ಅನ್ನಿಸಿದರು ಇಂತಹ ವಿಭಿನ್ನ ಹೆಸರುಗಳನ್ನು ತಮ್ಮ ಚಿತ್ರಗಳಿಗೆ ನೀಡಿ ಗೆದ್ದಿರುವ ಪರಂಪರೆ ಸಾಕಷ್ಟು ಕಾಲದಿಂದ ಕನ್ನಡ ಚಿತ್ರರಂಗದಲ್ಲಿದೆ. ಈ ಚಿತ್ರದ ವಿಷಯದ ವಿಷಯ ಸಹ ಹಾಗೆ ಆಗಿದೆ. ಮಾದಕ ತಾರೆ ಸುಕೃತ ವಾಗ್ಲೆ ಮುಖ್ಯ ಪಾತ್ರಧಾರಿ ಆಗಿರುವ ಈ ಚಿತ್ರದಲ್ಲಿ ವಿಜೆಟ್ ಹಾಗೂ ಅಖಿಲ್, ಹರಿಣಿ  ಅವರು ಈಕೆಯ ಜೊತೆಯಾಗಿದ್ದಾರೆ. ಕರಣ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಶಾಸ್ತ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ