ಸೋನಾಕ್ಷಿ ಕೇಳಿದ ಸಂಭಾವನೆಗೆ ಬೆಚ್ಚಿ ಬಿದ್ದ ಟಾಲಿವುಡ್ ನಿರ್ಮಾಪಕರು

ಶನಿವಾರ, 13 ಡಿಸೆಂಬರ್ 2014 (09:45 IST)
ಸೋನಾಕ್ಷಿ ಸಿನ್ಹಾ ದಕ್ಷಿಣ ಭಾರತದಲ್ಲಿ ತನಗೊಂದು ಸ್ಥಾನ ಪಡೆಯ ಬೇಕು   ಎನ್ನುವ ಕನಸನ್ನು ರಾಕ್ ಲೈನ್ ವೆಂಕಟೇಶ್ ನಿಜ ಮಾಡಿದ್ದಾರೆ. ಲಿಂಗಾ ಚಿತ್ರದಲ್ಲಿ ಆಕೆಗೆ ಅವಕಾಶ ನೀಡುವುದರ ಮೂಲಕ ಆಕೆಯ ಸಹಿತ ರಜನಿಕಾಂತ್ ಅವರ ಜೊತೆ ಜೊತೆಗೆ ಗೆಲುವಿನ ಖುಷಿ ಅನುಭವಿಸುವಂತೆ ಮಾಡಿದೆ. ಇತ್ತೀಚಿಗೆ ಟಾಲಿವುಡ್ ಮಂದಿಗೆ ಸೋನಾಕ್ಷಿ ಬಗ್ಗೆ ಹೆಚ್ಚು ಗಮನ ಇದ್ದು, ಆಕೆ ತಮ್ಮ ಚಿತ್ರಗಳಲ್ಲಿ ನಟಿಸಲಿ ಎನ್ನುವ ಆಶಯ ವ್ಯಕ್ತ ಪಡಿಸುತ್ತಿದ್ದಾರೆ. ಆಕೆ ಕೇಳಿದ ಮೊತ್ತಕ್ಕೆ ಬೆರಗಾಗಿ ದಂಗಾಗಿ ದೂರ ಸರಿದಿದ್ದಾರೆ. 
ಈಕೆ ಲಿಂಗಾ ಚಿತ್ರದ ನಂತರ ದಕ್ಷಿಣ  ಚಿತ್ರಗಳಲ್ಲಿ ನಟಿಸುವ ಸಾಧ್ಯತೆ ಹೆಚ್ಚಾಗಿತ್ತು. ಅದು ಈಗ ಸ್ಪಷ್ಟ ರೂಪಕ್ಕೆ ಬಂದಿದೆ. ರಾಮ್ ಚರಣ್ ತೇಜ ಅವರ ಮುಂದಿನ ಚಿತ್ರವನ್ನು ಶ್ರೀನು ವೈಟ್ಲ ನಿರ್ದೇಶಿಸುತ್ತಿದ್ದಾರೆ. ಅವರ ಈ ಚಿತ್ರಕ್ಕೆ ಸೋನಾಕ್ಷಿ ಕೇಳಿದ ಭಾರಿ  ಮೊತ್ತಕ್ಕೆ ಬೆದರದೆ ಆಯ್ಕೆ ಮಾಡಿಕೊಂಡಿದ್ದಾರೆ. ಏತನ್ಮಧ್ಯೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಚಿತ್ರ  ಗಬ್ಬರ್ ಸಿಂಗ್ 2  ನಲ್ಲಿ ಸೋನಾಕ್ಷಿಯನ್ನು ಆಯ್ಕೆ ಮಾಡುವ ಬಗ್ಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿತ್ತು ಎನ್ನುವ ಸುದ್ದಿ ಈಗ ಎಲ್ಲೆಡೆ ಹರಡಿದ್ದು, 
 
ಸೋನಾಕ್ಷಿಯ ಅಮೌಂಟ್ ಆ ರೇಂಜ್ ಗೆ  ಬೆದರಿದ ನಿರ್ಮಾಪಕರು ಅಯ್ಯೋ ನನ್ನ ಕೈಲಿ ಆಗಲ್ಲಪ್ಪೋ ಎಂದು ದೂರ ಸರಿದರಂತೆ. ಆದರೆ ಆಕೆ  ಚಿಕ್ಕಪ್ಪನ ಜೊತೆ ನಟಿಸದೆ ಇದ್ದರು ಸಹಿತ ಮಗನ ಜೊತೆ ನಟಿಸೋಕೆ ಓಕೆ ಎನ್ನುವುದರ ಮೂಲಕ ಮೆಗಾ ಕುಟುಂಬಕ್ಕೆ ಎಂಟ್ರಿ ಆಗಿದ್ದಾಳೆ ಎನ್ನುವ ಸಮಾಧಾನ ಹೊಂದಿದ್ದಾರೆ ಮೆಗಾ ಕುಟುಂಬದ ಅಭಿಮಾನಿಗಳು. 

ವೆಬ್ದುನಿಯಾವನ್ನು ಓದಿ