ನಾಳೆ ಪುನೀತ್ 11ನೇ ದಿನದ ಕಾರ್ಯಕ್ರಮ
ನಾಳೆ ನಟ ಪುನೀತ್ ಅವರ 11ನೇ ದಿನದ ಕಾರ್ಯ ನಡೆಯಲಿದೆ. ಬೆಳಗ್ಗೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸದಲ್ಲಿ ಕುಟುಂಬಸ್ಥರಿಂದ ಮನೆಯಲ್ಲಿ ಪೂಜೆ ಸಲ್ಲಿಕೆ ಮಾಡಲಾಗುತ್ತದೆ.
ನಂತರ ಕಂಠೀರವ ಸ್ಟುಡಿಯೋಗೆ ಕುಟುಂಬಸ್ಥರು ತೆರಳಲಿದ್ದಾರೆ. 12ನೇ ದಿನದ ಕಾರ್ಯ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆಯಲಿದ್ದು ಚಿತ್ರೋದ್ಯಮದ ಗಣ್ಯರು, ಆಪ್ತ ಬಳಗಕ್ಕೆ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ. ಸದ್ಯ ಕುಟುಂಬಸ್ಥರು ನಾಳಿನ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂದು, ಸಂಪ್ರದಾಯದಂತೆ ವಿನಯ್ ರಾಜಕುಮಾರ್ ತಲೆಗೂದಲು ತೆಗೆಸುವ ಶಾಸ್ತ್ರ ನಡೆಸಿದ್ದಾರೆ. ಸವಿತ ಸಮಾಜದ ರಮೇಶ್ ಎಂಬುವವರು ವಿನಯ್ ಅವರ ತಲೆಯಲ್ಲಿ ಐದು ಕಡೆ ಕೂದಲು ತೆಗೆಯುವ ಮೂಲಕ ಶಾಸ್ತ್ರ ನೆರವೇರಿಸಿದ್ದಾರೆ.
ನಾಳೆ ನಡೆಯುವ 11ನೇ ದಿನದ ಕಾರ್ಯಕ್ಕೆ ಪುನೀತ್ ನಿವಾಸದ ಎದುರು ಸಿದ್ಧತೆ ನಡೆಯುತ್ತಿದ್ದು, ಶಾಮಿಯಾನ ಹಾಕಲಾಗುತ್ತಿದೆ. ಮನೆಯಲ್ಲಿ ಕುಟುಂಬಸ್ಥರು ಕಾರ್ಯ ಮುಗಿಸಿದ ನಂತರ, ಕಂಠೀರವ ಸ್ಟುಡಿಯೋಗೆ ತೆರಳಲಿದ್ದು, ಅಲ್ಲಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಸುಮಾರು 11ಗಂಟೆಗೆ ಪುನೀತ್ ಕಾರ್ಯ ನಡೆಯಲಿದೆ.