ಬಾಗ್ಲು ತೆಗಿ ಮೇರಿ ಜಾನ್ ಎನ್ನುತ್ತಾ ಟ್ರೆಂಡ್ ಆಯ್ತು ತೋತಾಪುರಿ
ಬಾಗ್ಲು ತೆಗಿ ಮೇರಿ ಜಾನ್ ಎಂಬ ಉರ್ದು ಮಿಶ್ರಿತ ಕನ್ನಡ ಹಾಡು ಭರ್ಜರಿ ಹಿಟ್ ಆಗಿದೆ. ಹಾಡಿನ ಸಾಹಿತ್ಯದ ಜೊತೆಗೆ ಜಗ್ಗೇಶ್ ಹಾವಭಾವಗಳಿಂದಲೇ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.
ಈ ಮೊದಲು ಈ ಹಾಡಿನ ಸಾಲಿನಲ್ಲಿ ಕನ್ನಡವೇ ಇಲ್ಲ ಎಂದು ವಿವಾದಕ್ಕೊಳಗಾಗಿತ್ತು. ಆದರೆ ಆಗ ಜಗ್ಗೇಶ‍್ ಈ ಹಾಡನ್ನು ಪೂರ್ತಿಯಾಗಿ ಕೇಳಿ ಎಂದು ಭರವಸೆ ಕೊಟ್ಟಿದ್ದರು. ಅದರಂತೆ ಇದೀಗ ಪೂರ್ತಿ ಹಾಡು ಬಂದಿದ್ದು ಚಿತ್ರತಂಡ ಪ್ರಾಮಿಸ್ ಮಾಡಿದ ರೀತಿಯಲ್ಲೇ ಯೂ ಟ್ಯೂಬ್ ನಲ್ಲೂ ಟ್ರೆಂಡ್ ಆಗಿದೆ.