ಪಟ್ಟಾಭಿಷೇಕ ಸಿನಿಮಾದ ಟ್ರೇಲರ್ ರಿಲೀಸ್

ಮಂಗಳವಾರ, 22 ಸೆಪ್ಟಂಬರ್ 2015 (10:50 IST)
ತಾರೆಯರ ಮಕ್ಕಳು, ಮೊಮ್ಮಕ್ಕಳು ಸಿನಿಮಾರಂಗಕ್ಕೆ ಬರೋದು ಈಗ ಸಾಮಾನ್ಯವಾಗಿದೆ. ಸಿದ್ಧಾರ್ಥ್ ಸಿನಿಮಾದ ಮೂಲಕ ದಿವಂಗತ ಡಾ. ರಾಜ್ ಕುಮಾರ್ ಮೊಮ್ಮಗ ವಿನಯ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದರು. ಇದೀಗ ಕನ್ನಡದ ಕುಮಾರತ್ರರಲ್ಲಿ ಒಬ್ಬರೆನಿಸಿರುವ ಕಲ್ಯಾಣ್ ಕುಮಾರ್ ಮೊಮ್ಮಗ ಯುವರಾಜ್ ಸರದಿ. ಯುವರಾಜ್ ಕಲ್ಯಾಣ್ ಕುಮಾರ್ ಪಟ್ಟಾಭಿಷೇಕ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ.
ಇತ್ತೀಚೆಗಷ್ಟೇ ಯುವರಾಜ್ ಕಲ್ಯಾಣ ಕುಮಾರ್ ಅಭಿನಯದ ಪಟ್ಟಾಭಿಷೇಕ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸದ್ಯ ಸೆನ್ಸಾರ್ ಗಾಗಿ ಕಾಯುತ್ತಿರುವ ಈ ಸಿನಿಮಾ ಸೆನ್ಸಾರ್ ಬೋರ್ಡ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೇ ರಿಲೀಸ್ ಆಗಲಿದೆ. ಪಟ್ಟಾಭಿಷೇಕ ಸಿನಿಮಾವನ್ನು ಕೆಎಸ್ ಆರ್ ನಿರ್ದೇಶಿಸಿದ್ದು, ಯಶಸ್ ಬ್ಯಾನರ್ ನಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾಕ್ಕೆ ರಕ್ಷಿತ್ ನಗರಾಲೆ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ಯುವರಾಜ್ ಗೆ ನಾಯಕಿಯಗಿ ಗೌರಿ ನಾಯರ್ ಕಾಣಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ