ರಾಮ್ ಲೀಲಾ ಸಿನಿಮಾದ ಟ್ರೇಲರ್ ರಿಲೀಸ್

ಶನಿವಾರ, 3 ಅಕ್ಟೋಬರ್ 2015 (11:06 IST)
ಸ್ಯಾಂಡಲ್ ವುಡ್ ಅಭಿಮಾನಿಗಳು ಬಹು ದಿನದಿಂದ ಕಾಯುತ್ತಿದ್ದ ರಾಮ್ ಲೀಲಾ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಚಿರಂಜೀವಿ ಸರ್ಜಾ ಹಾಗೂ ಕ್ಯೂಟ್ ಗರ್ಲ್ ಅಮೂಲ್ಯ ಅಭಿನಯದ ಈ ಸಿನಿಮಾದ ಟ್ರೇಲರ್ ಅನ್ನು ನಟ ದರ್ಶನ್ ಬಿಡುಗಡೆಗೊಳಿಸಿದರು.
ದರ್ಶನ್ ತಮ್ಮ ಮನೆಯಲ್ಲೇ ಸಿನಿಮಾದ ಟ್ರೇಲರ್ ಅನ್ನು ರಿಲೀಸ್ ಮಾಡಿದ್ರು. ಟ್ರೇಲರ್ ನಲ್ಲಿ ಚಿರು ಸಖತ್ತಾಗಿ ಆಕ್ಷನ್ ಸೀನ್ ಗಳನ್ನು ಮಾಡಿದ್ದಾರೆ. ಇನ್ನು ಕ್ಯೂಟ್ ಗರ್ಲ್ ಅಮೂಲ್ಯ ಎಂದಿನಂತೆ ಈ ಸಿನಿಮಾದಲ್ಲೂ ತುಂಬಾನೇ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗುತ್ತಿದ್ದು, ನವೆಂಬರ್ ತಿಂಗಳಲ್ಲಿ ಈ ಸಿನಿಮಾ ಪ್ರೇಕ್ಷಕರೆದುರಿಗೆ ಬರೋ ಪ್ಲಾನ್ ನಲ್ಲಿದೆ.
 
ಇನ್ನು ಈ ಸಿನಿಮಾವನ್ನು ಸೌಂದರ್ಯ ಜಗದೀಶ್ ನಿರ್ಮಿಸಿದ್ದಾರೆ.ಅನೂಪ್ ರುಬೆನ್ಸ್ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಸಿನಿಮಾ ಟ್ರೇಲರ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ