ಈ ವಾರ ಒಂದೇ ದಿನ ಸ್ಯಾಂಡಲ್ ವುಡ್ ನ ಎರಡು ಬಹುನಿರೀಕ್ಷೆಯ ಚಿತ್ರಗಳು ತೆರೆಗೆ

ಬುಧವಾರ, 17 ಜುಲೈ 2019 (09:19 IST)
ಬೆಂಗಳೂರು: ಈ ವಾರಂತ್ಯದಲ್ಲಿ ಕನ್ನಡ ಸಿನಿ ರಸಿಕರಿಗೆ ಎರಡು ರಸಗವಳ ಸಿಗಲಿದೆ. ಒಂದೇ ದಿನ ಎರಡು ಬಹುನಿರೀಕ್ಷೆಯ ಚಿತ್ರ ಬಿಡುಗಡೆಯಾಗಲಿದೆ.


ಯುವ ಸಾಮ್ರಾಟ್ ಚಿರು ಸರ್ಜಾ ಅಭಿನಯದ ‘ಸಿಂಗ’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಈ ಸಿನಿಮಾದ ‘ಶಾನೆ ಟಾಪ್ ಆಗವ್ಳೇ’ ಸೇರಿದಂತೆ ಎಲ್ಲಾ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಚಿರು ಅಭಿಮಾನಿಗಳಿಗೆ ಇಷ್ಟವಾಗುವ ಹಾಗೆ ಇದೊಂದು ಪಕ್ಕಾ ಮಾಸ್ ಸಿನಿಮಾ.

ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಅಭಿನಯದ ‘ಆದಿಲಕ್ಷ್ಮಿ ಪುರಾಣ’ ಕೂಡಾ ಇದೇ ದಿನ ಬಿಡುಗಡೆಯಾಗಲಿದೆ. ಬಹಳ ದಿನಗಳ ನಂತರ ರಾಧಿಕಾ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿ ಅಭಿಮಾನಿಗಳದ್ದು. ಇದು ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್. ಈಗಾಗಲೇ ಇದರ ಟ್ರೈಲರ್ ಬಿಡುಗಡೆಯಾಗಿ ಹಿಟ್ ಆಗಿದೆ. ಹೀಗಾಗಿ ಈ ವಾರ ಎರಡು ಸಿನಿಮಾಗಳ ನಡುವೆ ಪೈಪೋಟಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ