ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ವಿರುದ್ಧ ಕೆಂಡಾಮಂಡಲರಾದ ಯುವರಾಜ್ ಸಿಂಗ್

ಸೋಮವಾರ, 15 ಜುಲೈ 2019 (09:37 IST)
ಮುಂಬೈ: ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ಸೋಲಿನ ಬಳಿಕ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮ್ಯಾನೇಜ್ ಮೆಂಟ್ ವಿರುದ್ಧ ಹರಿಹಾಯ್ದಿದ್ದಾರೆ.


ಟೀಂ ಇಂಡಿಯಾ ಚಿಂತಕರ ಚಾವಡಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಮೇಲೆ ಮಾಡಿದ ಅತಿಯಾದ ಪ್ರಯೋಗದ ಬಗ್ಗೆ ಮತ್ತು ಅಂಬಟಿ ರಾಯುಡು ಅವರನ್ನು ಕಡೆಗಣಿಸಿದ್ದಕ್ಕೆ ಯುವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಂಬಟಿ ರಾಯುಡು ಒಂದೆರಡು ಪಂದ್ಯಗಳಲ್ಲಿ ವಿಫಲರಾದ ಬಳಿಕ ಅವರನ್ನು ತಂಡದಿಂದ ಕೈ ಬಿಡಲಾಯಿತು. ಅವರನ್ನು ಬೆಳೆಸಲು ನೋಡಲಿಲ್ಲ. ನಂತರ ರಿಷಬ್ ಪಂತ್ ರನ್ನು ಕರೆತರಲಾಯಿತು. ರಿಷಬ್ ರನ್ನೂ ಕೈ ಬಿಡಲಾಯಿತು. ಹಿಂದೆ 2003 ರಲ್ಲಿ ವಿಶ್ವಕಪ್ ಗೆ ಮೊದಲು ನ್ಯೂಜಿಲೆಂಡ್ ಸರಣಿಯಲ್ಲಿ ನಾವೆಲ್ಲರೂ ವಿಫಲರಾದೆವು. ಹಾಗಿದ್ದರೂ ನಮ್ಮನ್ನು ಮತ್ತೆ ವಿಶ್ವಕಪ್ ಗೆ ಕಣಕ್ಕಿಳಿಸಲಾಯಿತು. ಆಟಗಾರರಿಗೆ ಮುಂದೆಯೂ ನೀನು ಆಡಬೇಕಾಗುತ್ತದೆ ಎಂದು ಬೆಳೆಸುವ ಕೆಲಸ ಮಾಡಬೇಕು’ ಎಂದು ಯುವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ