ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಆರಂಭದ ದಿನವೇ 250 ಕೋಟಿ ಬಾಚಿದ ಕಬಾಲಿ ಚಿತ್ರ

ಭಾನುವಾರ, 24 ಜುಲೈ 2016 (14:45 IST)
ಸೂಪರ್‌ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಮೊದಲ ದಿನವೇ 250 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.
 
ಒಂದು ವೇಳೆ, ವರದಿಗಳನ್ನು ನಂಬಬಹುದಾದರೆ, ರಜನಿ ಅಭಿನಯದ ಕಬಾಲಿ ಚಿತ್ರ ಆರಂಭದ ದಿನದಂದು 250 ಕೋಟಿ ರೂಪಾಯಿಗಳ ವಹಿವಾಟು ನಡೆಸಿದೆ.
 
ತಮಿಳುನಾಡಿನಲ್ಲಿ 150 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡ ಕಬಾಲಿ ಚಿತ್ರ, ದೇಶದ ಇತರ ರಾಜ್ಯಗಳಲ್ಲಿ 100 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ಚಿತ್ರನಿರ್ಮಾಪಕ ಮೂಲಗಳು ತಿಳಿಸಿವೆ.
 
ವಿಶ್ವದಾದ್ಯಂತ ಕಬಾಲಿ ಚಿತ್ರ 100 ಕೋಟ ರೂಪಾಯಿಗಳ ವಹಿವಾಟು ನಡೆಸಿದ್ದು ರಜನಿ ಪವರ್ ಏನು ಎನ್ನುವುದಕ್ಕೆ ವಿಶ್ವಕ್ಕೆ ಗೊತ್ತಾಗಿದೆ.
 
ಕಬಾಲಿ ಚಿತ್ರದಲ್ಲಿ ರಾಧಿಕಾ ಆಪ್ಟೆ, ವಿನ್‌ಸ್ಟೋನ್ ಚಾವೋ, ಧನಸಿಕಾ ಮತ್ತು ದಿನೇಶ್ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ