ಬಿಗ್ ಬಿ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು

ಮಂಗಳವಾರ, 1 ಸೆಪ್ಟಂಬರ್ 2015 (09:43 IST)
ಫೇಸ್ ಬುಕ್ , ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು ದುರ್ಬಳಕೆ ಆಗೋದು ಇತ್ತೀಚಿನ ದಿನಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದ್ರೆ ಇದೇ ಸಮಸ್ಯೆಗೆ ಈಗ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಸಿಲುಕಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಟ್ವಿಟರ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಬೇರೆ ಯಾರೋ ನನ್ನ ಖಾತೆಯನ್ನು ಉಪಯೋಗಿಸುತ್ತಿದ್ದಾರೆ ಎಂದು ಬಿಗ್ ಬಿ ಹೇಳಿಕೊಂಡಿದ್ದಾರೆ.ಈ ವಿಚಾರವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಅಮಿತಾಬ್ "ನನ್ನ ಟ್ವಿಟರ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಸೆಕ್ಸ್ ತಾಣಗಳನ್ನು ಯಾರೋ ಫಾಲೋ ಮಾಡುತ್ತಿರುವುದು ನನಗೆ ತೋರುತ್ತಿದೆ. ಇದರ ಅವಶ್ಯಕತೆ ನನಗಿಲ್ಲ" ಯಾರಿಗಿದೆಯೋ ಅವರು ಮಾಡಿಕೊಳ್ಳಲಿ ಅಂತಾ  ಟ್ವೀಟ್ ಮಾಡಿದ್ದಾರೆ.            
 
ಅಮಿತಾಬ್ ಬಚ್ಚನ್ ಅವರ ಟ್ವಿಟರ್ ಅಕೌಂಟ್ ಹ್ಯಾಕ್ ಅರಗಿರೋದು ಇತರೆ ಸ್ಟಾರ್ ಗಳಲ್ಲೂ ಆತಂಕ ಮೂಡಿಸಿದೆ. ಇದರ ಹಿಂದೆ ಯಾವುದಾದರೂ ಜಾಲಗಳು ಕಾರ್ಯನಿರವಹಿಸುತ್ತಿವೆಯೋ ಅನ್ನೋ ಅನುಮಾನಗಳು ಕೂಡ ವ್ಯಕ್ತವಾಗಿದೆ. ಅಮಿತಾಬ್ ಬಚ್ಚನ್ ಗೆ   ಟ್ವಿಟ್ಟರ್ ನಲ್ಲಿ    16.5 ದಶಲಕ್ಷ ಅನುಯಾಯಿಗಳಿದ್ದಾರೆ.

ವೆಬ್ದುನಿಯಾವನ್ನು ಓದಿ